ಚಿಕ್ಕಬಳ್ಳಾಪುರ: ಪಕ್ಕದ ಮನೆಯವರ ಮೇಲೆ ದಾಳಿ ಮಾಡಿ, ಮನೆಯಲ್ಲಿನ ವಸ್ತುಗಳು, ಕಿಟಕಿ, ಬಾಗಿಲು ಒಡೆದು ಹಾಕಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಜರುಗಿದೆ.
ಪಕ್ಕದ ಮನೆಯವರ ರೌಡಿಸಂ: ಮಧ್ಯರಾತ್ರಿ ದಾಳಿ ಮಾಡಿ ವಸ್ತುಗಳ ಧ್ವಂಸ - ಪಕ್ಕದ ಮನೆಯವರ ಮೇಲೆ ದಾಳಿ
ಬಾಗೇಪಲ್ಲಿ ಪಟ್ಟಣದ 9 ನೇ ವಾರ್ಡಿನಲ್ಲಿರುವ ಲಕ್ಷ್ಮಿಪತಿ ಎಂಬುವವರ ಮನೆಯ ಮೇಲೆ ಪಕ್ಕದ ಮನೆಯ ಗಂಗಪ್ಪ ಮತ್ತು ಅವರ ಕುಟುಂಬಸ್ಥರು, ಮಹಿಳೆಯರು ಮಧ್ಯರಾತ್ರಿ ದಾಳಿ ಮಾಡಿ ಮನೆಯ ಹೊರಗಿದ್ದ ವಸ್ತುಗಳನ್ನೆಲ್ಲಾ ಧ್ವಂಶಗೊಳಿಸಿದ್ದಾರೆ.
ಬಾಗೇಪಲ್ಲಿ ಪಟ್ಟಣದ 9 ನೇ ವಾರ್ಡಿನಲ್ಲಿರುವ ಲಕ್ಷ್ಮಿಪತಿ ಎಂಬುವವರ ಮನೆಯ ಮೇಲೆ ಪಕ್ಕದ ಮನೆಯ ಗಂಗಪ್ಪ ಮತ್ತು ಅವರ ಕುಟುಂಬಸ್ಥರು, ಮಹಿಳೆಯರು ಮಧ್ಯರಾತ್ರಿ ದಾಳಿ ಮಾಡಿದ್ದಾರೆ. ಆ ವೇಳೆ ಲಕ್ಷ್ಮಿಪತಿ ಮನೆಯಲ್ಲೇ ಇದ್ದು, ಇವರ ಆರ್ಭಟಕ್ಕೆ ಮನೆಯಿಂದ ಹೊರಬಂದಿಲ್ಲ. ಈ ಹಿನ್ನೆಲೆ ದೊಡ್ಡ ಸೈಜುಗಲ್ಲು, ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಕಿಟಕಿ ಬಾಗಿಲು ಹೊಡೆದು ಮನೆ ಪ್ರವೇಶಿಸಿಲು ಯತ್ನಿಸಿದ್ದಾರೆ. ಇದಲ್ಲದೆ, ಮನೆಯ ಹೊರಗಿದ್ದ ಬೈಕ್ ಹಾಗೂ ಗೃಹೋಪಯೋಗಿ ವಸ್ತುಗಳನ್ನ ಧ್ವಂಸಗೊಳಿಸಿದ್ದಾರೆ.
ಮೊದಲಿನಿಂದಲೂ ಲಕ್ಷ್ಮಿಪತಿ ಹಾಗೂ ಗಂಗಪ್ಪ ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಲಕ್ಷ್ಮಿಪತಿಯ ಮಗಳು ಶಾಲೆಯಿಂದ ಸ್ನೇಹಿತೆ ಜೊತೆ ಬರುವಾಗ ಗಂಗಪ್ಪ ಕೆಟ್ಟ ಮಾತುಗಳಿಂದ ನಿಂದಿಸಿದ್ದನಂತೆ. ಇದರಿಂದ ಲಕ್ಷ್ಮಿಪತಿಯ ಪತ್ನಿ, ಯಾಕೆ ನನ್ನ ಮಗಳನ್ನ ಬೈತೀಯಾ ಎಂದು ಗಂಗಪ್ಪನ ಕುಟುಂಬಸ್ಥರ ಜೊತೆ ಗಲಾಟೆ ಮಾಡಿಕೊಂಡಿದ್ದರಂತೆ.