ಕರ್ನಾಟಕ

karnataka

ETV Bharat / state

ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ ಬರೋಬ್ಬರಿ 13 ಲಕ್ಷ ದೋಚಿದ ಕಳ್ಳರು - Excise Bank

ಗ್ಯಾಸ್​ ಕಟರ್ ಬಳಸಿ ಎಟಿಎಂನಲ್ಲಿದ್ದ 13 ಲಕ್ಷ ರೂಪಾಯಿ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಎಟಿಎಂಗೆ ಹಣ ತುಂಬಿಸಲು ಸಿಬ್ಬಂದಿ ಬಂದಾಗ ಘಟನೆ ನಡೆದಿರುವುದು ತಿಳಿದು ಬಂದಿದೆ.

atm-theft-using-gas-cutter-and-robbed-13-lakhs
ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 13 ಲಕ್ಷ ರೂ. ದೋಚಿದ ಕಳ್ಳರು

By

Published : Aug 29, 2020, 3:14 PM IST

ಚಿಕ್ಕಬಳ್ಳಾಪುರ: ಸಿಸಿ ಕ್ಯಾಮೆರಾಗಳಿಗೆ ಪೇಯಿಂಟ್​ ಸ್ಪ್ರೇ ಮಾಡಿ ಎಟಿಎಂನಲ್ಲಿದ್ದ 13 ಲಕ್ಷ ರೂ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ನಗರದ ಹೃದಯ ಭಾಗದಲ್ಲಿರುವ ಶಿಡ್ಲಘಟ್ಟ ಸರ್ಕಲ್ ಬಳಿ ನಡೆದಿದೆ‌.

ನಗರದ ಶಿಡ್ಲಘಟ್ಟ ರಸ್ತೆಯ ಸೈಂಟ್​ ಜೋಸೆಫ್ ಕಾನ್ವೆಂಟ್ ಶಾಲೆ ಬಳಿಯಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿದ ಕಳ್ಳರು ಸಿಸಿ ಕ್ಯಾಮರಾಗಳಿಗೆ ಪೇಯಿಂಟ್​​ ಸ್ಪ್ರೇ ಮಾಡಿ ಗ್ಯಾಸ್ ಕಟರ್​ನಿಂದ ಎಟಿಎಂ ಮೆಷಿನ್​ ಕಟ್ ಮಾಡಿ ಅಪಾರ ಪ್ರಮಾಣದ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 13 ಲಕ್ಷ ರೂ. ದೋಚಿದ ಕಳ್ಳರು

ಸಿಬ್ಬಂದಿ ಎಟಿಎಂಗೆ ಹಣ ತುಂಬಲು ಬಂದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನೂ ಬ್ಯಾಂಕ್ ಸಿಬ್ಬಂದಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಡಿವೈಎಸ್​ಪಿ ರವಿಶಂಕರ್ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಙರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details