ಕರ್ನಾಟಕ

karnataka

ETV Bharat / state

ಅಣ್ಣನ ಮಗಳನ್ನು ಕೊಂದಿದ್ದ ಪ್ರಕರಣ: ಆರೋಪಿ ಕೊನೆಗೂ ಬಂಧನ - chikballapur news

ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಗ್ರಾಮದ ವಿಶೇಷ ಚೇತನ ಮಗು ಚಾರ್ವಿತಾ(5) ಸ್ವಂತ ಚಿಕ್ಕಪ್ಪನಿಂದಲೇ ಕೊಲೆಯಾಗಿದ್ದಳು. ಸದ್ಯ ಮಗುವಿನ ಚಿಕ್ಕಪ್ಪ ಆರೋಪಿ ಚಿಕ್ಕಪ್ಪ ಶಂಕರ್(32) ಕೊಲೆ ಮಾಡಿ ಪರಾರಿಯಾಗಿದ್ದ.

Arrest of accused who killed baby
ಅಣ್ಣನ ಮಗಳನ್ನು ಕೊಂದಿದ್ದ ಪ್ರಕರಣ

By

Published : Jan 14, 2021, 3:27 AM IST

ಚಿಕ್ಕಬಳ್ಳಾಪುರ: ಪ್ರೀತಿಯಿಂದ ತಬ್ಬಿಕೊಳ್ಳಲು ಬಂದ 5 ವರ್ಷದ ವಿಶೇಷ ಚೇತನ ಹೆಣ್ಣು ಮಗುವಿನ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ ಚಿಕ್ಕಪ್ಪ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಗ್ರಾಮದ ವಿಶೇಷ ಚೇತನ ಮಗು ಚಾರ್ವಿತಾ(5) ಸ್ವಂತ ಚಿಕ್ಕಪ್ಪನಿಂದಲೇ ಕೊಲೆಯಾಗಿದ್ದಳು. ಸದ್ಯ ಮಗುವಿನ ಚಿಕ್ಕಪ್ಪ ಆರೋಪಿ ಚಿಕ್ಕಪ್ಪ ಶಂಕರ್(32) ಕೊಲೆ ಮಾಡಿ ಪರಾರಿಯಾಗಿದ್ದ. ಆದರೆ ಇಂದು ಪೊಲೀಸರ ಅತಿಥಿಯಾಗಿದ್ದಾನೆ.

ಶಂಕರ್ ಬಾಲಕಿಯನ್ನು ಕೆಟ್ಟ ಶಕುನವೆಂದು ಪರಿಗಣಿಸುತ್ತಿದ್ದ ಇದೇ ವಿಚಾರವಾಗಿ ಈತನನ್ನು ಮನೆಯಿಂದ ಹೊರ ಹಾಕಲಾಗಿತ್ತು.ಆದರೆ ಕೆಲವು ದಿನಗಳ ನಂತರ ಮತ್ತೆ ಮನೆಗೆ ಬಂದ ವೇಳೆ ಪುಟ್ಟ ಬಾಲಕಿ ಚಾರ್ವಿತ ಚಿಕ್ಕಪ್ಪನನ್ನು ಪ್ರೀತಿಯಿಂದ ತಬ್ಬಿಕೊಳ್ಳಲು ಹೋದ ವೇಳೆ ಜೇಬಿನಲ್ಲಿದ್ದ ಚಾಕುವಿನಿಂದ ಕತ್ತನ್ನು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ.

ಘಟನೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಂಕರ್ ಪತ್ತೆಗೆ ಬಲೆ ಬೀಸಲಾಗಿತ್ತು.

ABOUT THE AUTHOR

...view details