ಚಿಕ್ಕಬಳ್ಳಾಪುರ: ಶ್ರೀಗಂಧ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದು ಚಿಂತಾಮಣಿ ಶಾಸಕ ಎಂ.ಕೃಷ್ಣ ರೆಡ್ಡಿಗೆ ಶ್ರೀಗಂಧ ಬೆಳೆಗಾರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಶ್ರೀಗಂಧ ಬೆಳೆಗಾರರ ಸಮಸ್ಯೆ.. ಸರ್ಕಾರದ ಗಮನ ಸೆಳೆಯಲು ಶಾಸಕ ಕೃಷ್ಣ ರೆಡ್ಡಿಗೆ ಮನವಿ - Appeal from Sandalwood Growers Association to M. Krishna Reddy
ಅವಳಿ ಜಿಲ್ಲೆಗಳನ್ನು ಬರ ಮುಕ್ತಗೊಳಿಸುವ ಉದ್ದೇಶದಿಂದ ನೀಲಗಿರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನೀಲಗಿರಿ ಬೆಳೆಗೆ ಪರ್ಯಾಯ ಬೆಳೆಯನ್ನಾಗಿ ಶ್ರೀಗಂಧ ಬೆಳೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಅವಳಿ ಜಿಲ್ಲೆಗಳಲ್ಲಿ 650 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧ ಬೆಳೆಯಲಾಗಿದೆ..
ಎಂ.ಕೃಷ್ಣ ರೆಡ್ಡಿಗೆ ಶ್ರೀಗಂಧ ಬೆಳೆಗಾರರ ಸಂಘದಿಂದ ಮನವಿ
ಅವಳಿ ಜಿಲ್ಲೆಗಳನ್ನು ಬರ ಮುಕ್ತಗೊಳಿಸುವ ಉದ್ದೇಶದಿಂದ ನೀಲಗಿರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನೀಲಗಿರಿ ಬೆಳೆಗೆ ಪರ್ಯಾಯ ಬೆಳೆಯನ್ನಾಗಿ ಶ್ರೀಗಂಧ ಬೆಳೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಅವಳಿ ಜಿಲ್ಲೆಗಳಲ್ಲಿ 650 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧ ಬೆಳೆಯಲಾಗಿದೆ.
ಇಷ್ಟಾದ್ರೂ ಸರ್ಕಾರ ಶ್ರೀಗಂಧ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದ ಆರ್ಥಿಕ ಸಂಪತ್ತನ್ನು ಹೆಚ್ಚಿಸುವಲ್ಲಿ ಶ್ರೀಗಂಧ ಬೆಳೆ ಪ್ರಮುಖವಾಗಿದೆ. ಈ ಹಿನ್ನೆಲೆ ಶಾಸಕರು ಅಧಿವೇಶನಲ್ಲಿ ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.