ಕರ್ನಾಟಕ

karnataka

ETV Bharat / state

ಮಾಜಿ ಸ್ಪೀಕರ್​ ರಮೇಶ್ ಕುಮಾರ್ ವಿರುದ್ಧ ಅವಾಚ್ಯ ಪದ ಬಳಕೆ: ಕ್ಷಮೆ ಕೇಳಿದ ಕುಮಾರಸ್ವಾಮಿ - ಶಾಸಕ ರಮೇಶ್ ಕುಮಾರ್​ಗೆ ಕ್ಷಮೆ ಕೇಳಿದ ಕುಮಾರಸ್ವಾಮಿ

ಮಾಜಿ ಸ್ಪೀಕರ್​ ರಮೇಶ್ ಕುಮಾರ್ ವಿರುದ್ಧ ಕೋಪದಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದೆ. ನಾನು ಬಳಸಿದ ಅವಾಚ್ಯ ಶಬ್ಧ ಬಳಕೆಯಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಹೆಚ್​​ ಡಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ.

ಕ್ಷಮೆ ಕೇಳಿದ ಕುಮಾರಸ್ವಾಮಿ
ಕ್ಷಮೆ ಕೇಳಿದ ಕುಮಾರಸ್ವಾಮಿ

By

Published : Nov 23, 2022, 2:52 PM IST

ಚಿಕ್ಕಬಳ್ಳಾಪುರ:ಮಾಜಿ ಸ್ಪೀಕರ್ ರಮೇಶ್ ಕುಮಾರ್‌ ಹಾಗೂ ಅವರ ಅಭಿಮಾನಿಗಳಿಗೆ, ಮಾಜಿ ಮುಖ್ಯಮಂತ್ರಿ ಹೆಚ್​​ ಡಿ ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ. ನಾನು ಬಳಸಿದ ಅವಾಚ್ಯ ಶಬ್ಧ ಬಳಕೆಯಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಕೈವಾರ ಕ್ಷೇತ್ರದಲ್ಲಿ ಕ್ಷಮೆ ಯಾಚಿಸಿದ್ದಾರೆ.

ಶಾಸಕ ರಮೇಶ್ ಕುಮಾರ್​ಗೆ ಕ್ಷಮೆ ಕೇಳಿದ ಕುಮಾರಸ್ವಾಮಿ

ಪಂಚರತ್ನ ಯೋಜನೆ ಮೂಲಕ ನಾಡಿನ‌ ಜನತೆಗೆ ಸ್ಪಂಧಿಸುವ ಕೆಲಸ ನಮ್ಮದು. ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶ. ಬೇರೆಯವರಿಗೆ ಯಾಕೆ ಉತ್ತರ ಕೊಡಲಿ, ಜನರು ತೀರ್ಮಾನ ಮಾಡುತ್ತಾರೆ. ಮಂಡ್ಯದಲ್ಲಿ‌ ಅಭಿವೃದ್ದಿ ಏನು‌ ಇಲ್ವಾ ಎಂಬ ಪ್ರಶ್ನೆಗೆ ಅವರಿಗೆ ಏನು ಗೊತ್ತಿಲ್ಲ. ಅವರು ಅಭಿವೃದ್ಧಿಯನ್ನು ಮರೆತು ಹೋಗಿದ್ದಾರೆ ಎಂದು ಹೇಳಿದರು.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಾಸ್ತೇನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ವೇಳೆ, ಅಲ್ಲಿನ ಮಕ್ಕಳ‌ ಪರಿಸ್ಥಿತಿ ನೋಡಿ ಬಾಯಿ ತಪ್ಪಿ ರಮೇಶ್ ಕುಮಾರ್ ಅವರ ವಿರುದ್ಧ ಅವಾಚ್ಯ ಶಬ್ಧ ಪದ ಬಳಕೆ ಮಾಡಲಾಗಿದೆ. ಮಕ್ಕಳು ಬೀದಿಯಲ್ಲಿ ಚಳಿ‌ ಗಾಳಿ ಮಳೆ ಲೆಕ್ಕಿಸದೆ ಪಾಠ ಕಲಿಯುತ್ತಿದ್ದಾರೆ. ಮಕ್ಕಳ ಗೋಳನ್ನು ನೋಡಿ ಆ ಪದಬಳಕೆ ಮಾಡಿರುವೆ. ಯಾರಿಗಾದ್ರು ಮನಸ್ಸಿಗೆ ನೋವಾಗಿದ್ರೆ, ರಮೇಶ್ ಕುಮಾರ್ ಹಾಗೂ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತಿರುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮಾಜಿ ಸ್ಪೀಕರ್ ರಮೇಶ್ ಕುಮಾರ್​ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ: ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ABOUT THE AUTHOR

...view details