ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರಲ್ಲಿ ಕೊರೊನಾಗೆ ಮೂರನೇ ಬಲಿ: ರಾಜ್ಯದಲ್ಲಿ 11ಕ್ಕೇರಿದ ಸಾವಿನ ಸಂಖ್ಯೆ - corona latest news

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಮೂರನೇ ಬಲಿ ಪಡೆದಿದೆ. ಮೃತ ವ್ಯಕ್ತಿ ಮೊದಲು ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಳಿಕ ವಿಕ್ಟೋರಿಯಾಗೆ ರವಾನಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಸಾವಿನ ಸಂಖ್ಯೆ ರಾಜ್ಯದಲ್ಲಿ 11ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರಲ್ಲಿ ಕೊರೊನಾಗೆ ವ್ಯಕ್ತಿ ಬಲಿ
ಚಿಕ್ಕಬಳ್ಳಾಪುರಲ್ಲಿ ಕೊರೊನಾಗೆ ವ್ಯಕ್ತಿ ಬಲಿ

By

Published : Apr 15, 2020, 12:33 PM IST

ಚಿಕ್ಕಬಳ್ಳಾಪುರ: ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ನಗರದ 69 ವರ್ಷದ ರೋಗಿ ಕೋವಿಡ್​-19 ಗೆ ಇಂದು ಬಲಿಯಾಗಿದ್ದಾನೆ.

ತೀವ್ರ ಶ್ವಾಸಕೋಶ, ಆಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ಈತ, ಮೊದಲು ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಳಿಕ ವೃದ್ಧನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್​

ಯಾವುದೇ ಟ್ರಾವೆಲ್ ಹಿಸ್ಟರಿ ಇರದ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿದ್ದು, ಕೊರೊನಾ ಲಾಕ್​ಡೌನ್​ ಜಿಲ್ಲೆಯ ಜನತೆಯಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿತ್ತು. ರಾಜ್ಯದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ವೃದ್ಧ ಕೊರೊನಾದಿಂದ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ದೃಢಪಡಿಸಿದ್ದಾರೆ.

ಈವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details