ಕರ್ನಾಟಕ

karnataka

ETV Bharat / state

ಆಸ್ಪತ್ರೆಗೆ ತೋರಿಸದ ಗಂಡ : ನೇಣಿಗೆ ಶರಣಾದ ಅಂಗನವಾಡಿ ಟೀಚರ್....!

ಅಂಗನವಾಡಿ ಶಿಕ್ಷಕಿಯೊಬ್ಬಳು ಗಂಡನ ಮಾತುಗಳಿಗೆ ಬೇಸತ್ತು ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಚ್ಚಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನೇಣಿಗೆ ಶರಣಾದ ಅಂಗನವಾಡಿ ಟೀಚರ್
ನೇಣಿಗೆ ಶರಣಾದ ಅಂಗನವಾಡಿ ಟೀಚರ್

By

Published : Nov 27, 2019, 2:52 AM IST

Updated : Nov 27, 2019, 7:20 AM IST

ಚಿಕ್ಕಬಳ್ಳಾಪುರ : ಅಂಗನವಾಡಿ ಶಿಕ್ಷಕಿಯೊಬ್ಬಳು ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಚ್ಚಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನೇಣಿಗೆ ಶರಣಾದ ಅಂಗನವಾಡಿ ಟೀಚರ್


ವರಲಕ್ಷ್ಮಿ (23) ಮೃತ ಶಿಕ್ಷಕಿ ಎಂದು ತಿಳಿದು ಬಂದಿದೆ. ಗ್ರಾಮದ ಅಂಗನವಾಡಿಯಲ್ಲಿ ವರಲಕ್ಷ್ಮಿ ನಾಲ್ಕು ವರ್ಷಗಳಿಂದ ಟೀಚರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ಗಂಡ ಮಂಜುನಾಥ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ.

ವರಲಕ್ಷ್ಮಿಗೆ ಹುಷಾರಿಲ್ಲದ ಕಾರಣ ಗಂಡನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ಗಂಡ ಹಣದ ಕೊರತೆಯಿದ್ದು, ಇಂದು ಅಥವಾ ನಾಳೆ ತೋರಿಸುವುದಾಗಿ ಹೇಳಿಕೆ ನೀಡಿದ್ದಾರೆ.

ನಿತ್ಯ ಇದೇ ಮಾತುಗಳಿಗೆ ಬೇಸತ್ತ ಶಿಕ್ಷಕಿ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾಳೆ ಎಂದು ಪೊಲೀಸ್ ತಪಾಸಣೆಯಲ್ಲಿ ತಿಳಿದು ಬಂದಿದೆ. ಇನ್ನೂ ಈ ಪ್ರಕರಣ ಕೆಂಚಾರ್ಲಹಳ್ಳಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Last Updated : Nov 27, 2019, 7:20 AM IST

ABOUT THE AUTHOR

...view details