ಚಿಕ್ಕಬಳ್ಳಾಪುರ:ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ 6 ತಾಲೂಕುಗಳಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ 6 ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಹುದ್ದೆಗಳು ಖಾಲಿ ಇದ್ದು. ಗೌರವಧನ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕ ಮಾಡಿಕೊಳ್ಳಲಾಗುವುದು. ಸಹಾಯಕಿಯರ ಹುದ್ದೆಗೆ ಅಂಗವಿಕಲರ ಅರ್ಹರಾಗುವುದಿಲ್ಲ.
ಹುದ್ದೆಗಳು..
- ಕಾರ್ಯಕರ್ತೆಯರ ಹುದ್ದೆಗಳು:- 17 (8 ಮಿನಿ ಅಂಗನವಾಡಿ )
- ಸಹಾಯಕಿಯರ ಹುದ್ದೆಗಳು :- 73
ಒಟ್ಟು : 90
ವಯೋಮಿತಿ...
- ಕನಿಷ್ಠ 18 ವರ್ಷದಿಂದ ಗರಿಷ್ಟ 35 ವರ್ಷ
ಆದ್ಯತೆ :
- ವಿದ್ಯಾರ್ಹತೆ, ವಯೋಮಿತಿ, ಆ್ಯಸಿಡ್ ದಾಳಿಗೆ ತುತ್ತದವರು. ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದವರು, ವಿಧವೆಯರು ಮತ್ತು ಸ್ಥಳೀಯರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.