ಕರ್ನಾಟಕ

karnataka

ETV Bharat / state

ಅಂಗನವಾಡಿ ಕಾರ್ಯಕರ್ತೆಯ ಕತ್ತು ಸೀಳಿ ಚಿನ್ನಾಭರಣ ಕಳ್ಳತನ.. ಬೆಚ್ಚಿಬಿದ್ದ ಚಿಕ್ಕಬಳ್ಳಾಪುರ ಜನ - anganwadi worker murder case

ಅಂಗನವಾಡಿ ಕಾರ್ಯಕರ್ತೆಯ ಕೊಲೆ- ಚಿನ್ನಾಭರಣ ದರೋಡೆ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಕರಣ

anganwadi worker murder
ಅಂಗನವಾಡಿ ಕಾರ್ಯಕರ್ತೆಯ ಕತ್ತು ಸೀಳಿ ಕಳ್ಳತನ ಮಾಡಿದ ಖದೀಮರು ಬೆಚ್ಚಿಬಿದ್ದ ಗ್ರಾಮಸ್ಥರು

By

Published : Jul 13, 2022, 2:25 PM IST

ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ‌ ಮಾಡಿ ಚಿನ್ನಭರಣ ದೋಚಿ ಪರಾರಿಯಾದ ಭಯಾನಕ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿಯಲ್ಲಿ ನಡೆದಿದೆ. ಚೊಕ್ಕನಹಳ್ಳಿ ಗ್ರಾಮದ ವೆಂಕಟಲಕ್ಷ್ಮಮ್ಮ(45) ಕೊಲೆಯಾದ ಮಹಿಳೆ. ಮನೆಗಳ್ಳತನ ಮಾಡಲು ಬಂದಿದ್ದ ಖದೀಮರು ಬರ್ಬರವಾಗಿ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ವೆಂಕಟಲಕ್ಷ್ಮಮ್ಮ ಚೊಕ್ಕನಹಳ್ಳಿಯಲ್ಲಿ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಮೃತ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಹಿಳೆ ಬರ್ಬರವಾಗಿ ಕೊಲೆಯಾದ ಕಾರಣ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಶ್ವಾನಗಳೊಂದಿಕ್ಕೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಚಿಂತಾಮಣಿ ಗ್ರಾಮಾಂತರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ರೈಲ್ವೇ ಅಂಡರ್​ಪಾಸ್​ ಕುಸಿದು ನಾಲ್ವರು ಕಾರ್ಮಿಕರು ಸಾವು

ABOUT THE AUTHOR

...view details