ಕರ್ನಾಟಕ

karnataka

ETV Bharat / state

ಆನಂದ್​​ ಸಿಂಗ್​​​ ಬಿಜೆಪಿ ಸೇರಲು ರಾಜೀನಾಮೆ ಕೊಟ್ಟಿಲ್ಲ: ಶಾಸಕ ಸುಬ್ಬಾರೆಡ್ಡಿ - undefined

ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದು ಬಿಜೆಪಿ ಸೇರುವ ನಿಟ್ಟಿನಲ್ಲಿ ಅಲ್ಲ. ಜಿಂದಾಲ್ ಕಂಪನಿಗೆ ಜಮೀನು ಕೊಟ್ಟಿರುವುದನ್ನು ವಿರೋಧಿಸಿ ಎಂದು ಚಿಕ್ಕಬಳ್ಳಾಪುರದಲ್ಲಿ ಶಾಸಕ ಸುಬ್ಬಾರೆಡ್ಡಿ ಹೇಳಿದ್ದಾರೆ.

ಶಾಸಕ ಸುಬ್ಬಾರೆಡ್ಡಿ

By

Published : Jul 2, 2019, 9:37 PM IST

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ರೀತಿಯ ಅಡೆತಡೆಗಳು ಬರುತ್ತಿವೆ. ಸದ್ಯ ರಾಜೀನಾಮೆ ಪರ್ವ ಆರಂಭವಾಗಿದ್ದು, ದೋಸ್ತಿಗಳಿಗೆ ದೊಡ್ಡ ಗಂಡಾಂತರ ಶುರುವಾಗಿದೆ.

ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದು ಬಿಜೆಪಿ ಸೇರುವ ನಿಟ್ಟಿನಲ್ಲಿ ಅಲ್ಲ. ಜಿಂದಾಲ್ ಕಂಪನಿಗೆ ಜಮೀನು ಕೊಟ್ಟಿರುವುದನ್ನು ವಿರೋಧಿಸಿ ಅವರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್​ ಶಾಸಕ ಸುಬ್ಬಾರೆಡ್ಡಿ ಹೇಳಿದ್ದಾರೆ.

ಶಾಸಕ ಸುಬ್ಬಾರೆಡ್ಡಿ

ಇನ್ನು ರಮೇಶ್ ಜಾರಕಿಹೊಳಿ ಮೊದಲನಿಂದಲೂ ರಾಜೀನಾಮೆ ಕೊಡುವುದಾಗಿ ಹೇಳಿಕೆ ನೀಡುತ್ತಿದ್ದರು. ಈಗ ಕೊಟ್ಟಿದ್ದಾರೆ ಅಷ್ಟೇ. ಆದರೂ ಪಕ್ಷದ ವರಿಷ್ಠರು ಇದನ್ನೆಲ್ಲಾ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ. ಸಮ್ಮಿಶ್ರ ಸರ್ಕಾರ ನಾಲ್ಕು ವರ್ಷಗಳ ಕಾಲ ಆಡಳಿತದಲ್ಲಿರುತ್ತದೆಂದು ಶಾಸಕ ಸುಬ್ಬಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details