ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ರೈತನ ಮೇಲೆ ಗಣಿ ಲಾರಿ ಹತ್ತಿಸಿ ಕೊಲೆ ಯತ್ನ ಆರೋಪ

ಚಿಕ್ಕಬಳ್ಳಾಪುರ ತಾಲೂಕಿನ ಗುಮ್ಮಲಾಪುರ ಬೆಟ್ಟದ ತಪ್ಪಲಿನಲ್ಲಿ ರೈತನ ಮೇಲೆ ಗಣಿಗಾರಿಕೆ ಲಾರಿ ಹತ್ತಿಸಿದ ಘಟನೆ ನಡೆದಿದೆ.

ಎ ಬಿ ರಾಘವೇಂದ್ರ
ಎ ಬಿ ರಾಘವೇಂದ್ರ

By

Published : Jun 20, 2023, 10:59 PM IST

ಶಾಸಕ ಪ್ರದೀಪ್ ಈಶ್ವರ್ ಅವರು ಮಾತನಾಡಿದರು

ಚಿಕ್ಕಬಳ್ಳಾಪುರ : ಗಣಿಗಾರಿಕೆ ದಂಧೆಕೋರರ ಅಟ್ಟಹಾಸ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪೊಲೀಸ್​ ಹೆಡ್​ ಕಾನ್ಸ್​​ಟೇಬಲ್ ಮೇಲೆ ಟ್ರ್ಯಾಕ್ಟರ್​ ಹತ್ತಿಸಿ ಕೊಲೆ ಮಾಡಿದ್ದರು. ಅದರಂತೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ರೈತನ ಮೇಲೆ ಗಣಿಗಾರಿಕೆ ಲಾರಿ ಹತ್ತಿಸಿದ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಮ್ಮಲಾಪುರ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಆದರೆ ಈ ಪ್ರಕರಣದಲ್ಲಿ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಅಕ್ರಮ ಚಟುವಟಿಕೆಗಳಿಗೆ ಏಕಿಲ್ಲ ಕಡಿವಾಣ?: ಪೊಲೀಸ್ ಅಧಿಕಾರಿಗಳಿಗೆ ಪ್ರಿಯಾಂಕ್​ ಖರ್ಗೆ ಕ್ಲಾಸ್

ಲಾರಿ ಹತ್ತಿಸಿ ಹತ್ಯೆಗೆ ಯತ್ನ? : ರೈತ ತನ್ನ ಜಮೀನಿನಲ್ಲಿ ಗಣಿಗಾರಿಕೆ ಲಾರಿ ಹೋಗಬಾರದೆಂದು ತಡೆದಿದ್ದನು. ಆದರೆ ಆತ ಅಡ್ಡಿಪಡಿಸಿದ್ದಕ್ಕೆ ಲಾರಿ ಹತ್ತಿಸಿ ಹತ್ಯೆಗೆ ಯತ್ನಿಸಲಾಗಿದೆ ಎನ್ನಲಾಗುತ್ತಿದೆ. ಘಟನೆಯಿಂದ ಅಡ್ಡಗಲ್ಲು ಗ್ರಾಮದ ಎ.ಬಿ. ರಾಘವೇಂದ್ರ ಎಂಬ ರೈತ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಬಸವರಾಜ​ ಬೊಮ್ಮಾಯಿ ಧಮ್ಮು, ತಾಕತ್ತಿಗೆ ರಾಜ್ಯದ ಜನ ಈಗಾಗಲೇ ಉತ್ತರ ನೀಡಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್​

ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಜೂನ್ 17 ರಂದು ಸಂಜೆ ಘಟನೆ ನಡೆದಿದೆ. ಘಟನೆಯಿಂದಾಗಿ ತೀವ್ರ ಗಾಯಗೊಂಡಿದ್ದರು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ಲಾರಿ ಚಾಲಕ​ನ ಕೊಲೆಗೈದು ಸ್ಟೀಲ್ ಕಳ್ಳತನ: ಐವರ ಬಂಧನ

12 ಲಾರಿಗಳನ್ನು ಸೀಜ್ ಮಾಡಿದ ಅಧಿಕಾರಿಗಳು:ಕ್ರಷರ್​ಗಳ ಬಳಿಯಿಂದ ಬರುವಂತಹ ಲಾರಿಗಳನ್ನು ಅತಿಯಾದ ವೇಗದಿಂದ ಹಾಗೂ ಓವರ್ ಲೋಡ್ ಬಳಸಿ ವಾಹನವನ್ನು ಚಲಾಯಿಸುತ್ತಾರೆ ಎಂಬ ದೂರು ಬಂದಿದೆ. ಈಗಾಗಲೇ ಎಲ್ಲಾ ಕ್ರಷರ್ ಮಾಲೀಕರಿಗೆ ಕ್ರಷರ್​ಗಳನ್ನು ನಿಲ್ಲಿಸುವಂತೆ ನೋಟಿಸ್ ಕೊಡಲಾಗಿದೆ. ಈಗಾಗಲೇ ಅಧಿಕಾರಿಗಳು 12 ಲಾರಿಗಳನ್ನು ಸೀಸ್ ಮಾಡಿದ್ದಾರೆ.

ಇದನ್ನೂ ಓದಿ:Bengaluru crime: ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ.. ಮಾಜಿ ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಪುಡಿರೌಡಿಯ ಹಾವಳಿ

ಯಾವುದೇ ಅನಧಿಕೃತ ಲೈಸೆನ್ಸ್ ಇಲ್ಲದ ಕ್ರಷರ್​ಗಳು ಕೆಲಸ ಮಾಡಲು ಬಿಡುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇನ್ನು ಅಪಘಾತದಲ್ಲಿ ಲಾರಿ ಓವರ್ಲೋಡ್ ಆದ್ದರಿಂದ ಕಂಟ್ರೋಲ್ ಸಿಗದೆ ಹಿಂಬದಿಯಲ್ಲಿದ್ದಂತಹ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದರೆ, ಇದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ತನಿಖೆ ನಡೆಸಲಿದ್ದಾರೆ. ತನಿಖೆ ನಂತರ ತಪ್ಪಿದ್ದರೆ ಲಾರಿಯ ಚಾಲಕ ಹಾಗೂ ವಾಹನವನ್ನು ಸೀಸ್ ಮಾಡಲಿದ್ದೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.

ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ : ಇನ್ನೊಂದೆಡೆ ಆರ್ ಟಿ ನಗರದ ಎಂಎಲ್ಎ ಲೇಔಟಿನಲ್ಲಿ ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಪುಡಿರೌಡಿಯೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾವ 2.30ರ ಸುಮಾರಿಗೆ ನಡೆದಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ನಿವಾಸದಿಂದ ಕೂಗಳತೆ ದೂರದಲ್ಲಿಯೇ ಘಟನೆ ನಡೆದಿದ್ದು, ಅಪರಿಚಿತ ಆರೋಪಿಯ ಕೃತ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಅಲ್ಬರ್ಟ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಮಹಿಳೆ ಕೊಂದು ಸುಟ್ಟು ಹಾಕಿದ ಹಂತಕ ಸೆರೆ; 7 ದಿನಗಳ ನಂತರ ಪ್ರಕರಣ ಬಯಲು

ABOUT THE AUTHOR

...view details