ಚಿಕ್ಕಬಳ್ಳಾಪುರ:ಕೋರ್ಟ್ಅಟೆಂಡರ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವಕೀಲ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಮೃತ ಆರೋಪಿಯನ್ನು ಕೊರ್ಟ್ ವಕೀಲ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ಕೋರ್ಟ್ ಅಟೆಂಡರ್ ನವೀನ್ ಕುಮಾರ್ ಕೊಲೆ ಹಿನ್ನೆಲೆಯಲ್ಲಿ ಮುಖ್ಯ ಆರೋಪಿಯಾಗಿ ಸೆರೆಯಾಗಿದ್ದ ಈತ ಜಿಲ್ಲೆಯ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿದ್ದನು.
ಕಳೆದ ಆ. 17ರಂದು ಚಿಕ್ಕಬಳ್ಳಾಪುರದ ಪ್ರಶಾಂತ ನಗರದ ಬಾಡಿಗೆ ಕೊಠಡಿಯೊಂದರಲ್ಲಿ ಸಿವಿಲ್ ನ್ಯಾಯಾಲಯದ ಅಟೆಂಡರ್ ನವೀನ್ ಎಂಬಾತನನ್ನು ಜೀನ್ಸ್ ಪ್ಯಾಂಟಿನಿಂದ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪ್ರೇಯಿಸಿ ದೀಪಾ, ಈಕೆಯ ಪ್ರೇಮಿ ವಕೀಲ ನವೀನ್ ಮತ್ತು ಆತನ ಇಬ್ಬರು ಕ್ಲೈಂಟ್‍ಗಳನ್ನು ಬಂಧಿಸಲಾಗಿತ್ತು.