ಕರ್ನಾಟಕ

karnataka

ETV Bharat / state

ಮಹಿಳೆಯನ್ನು ಲೈಂಗಿಕತೆಗೆ ಪೀಡಿಸಿದ ಆರೋಪ: ಒಪ್ಪದ್ದಕ್ಕೆ ವ್ಯಕ್ತಿಯಿಂದ ಕೊಲೆ - murder in chikkaballapura

ವೆಂಕಟೇಶ್​ ಎಂಬ ವ್ಯಕ್ತಿ ಒಬ್ಬ ಮಹಿಳೆಯನ್ನು ಲೈಂಗಿಕ ತೃಷೆ ತೀರಿಸಿಕೊಳ್ಳಲು ಒತ್ತಾಯಿಸಿದ್ದಾನೆ. ಇದಕ್ಕೆ ಆಕೆ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕೊಲೆ ಮಾಡಿರುವ ಸಂಗತಿ ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ.

ಮಹಿಳೆ ಕೊಲೆ
ಮಹಿಳೆ ಕೊಲೆ

By

Published : Nov 16, 2022, 6:34 PM IST

ಚಿಕ್ಕಬಳ್ಳಾಪುರ:ಲೈಂಗಿಕತೆಗೆ ಒಪ್ಪದ ಮಹಿಳೆಯನ್ನು‌ ಕೊಲೆ ಮಾಡಿ,‌ ಅರಣ್ಯಪ್ರದೇಶದಲ್ಲಿ ಬೀಸಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಲ್ಲಿನ ವ್ಯಕ್ತಿಯೊಬ್ಬರ ಎರಡನೇ ಪತ್ನಿ ಕೊಲೆಯಾದ ಮಹಿಳೆ ಎಂದು ತಿಳಿದು ಬಂದಿದೆ.

ಕಳೆದ ದಿನವಷ್ಟೇ ಮೇಕೆಗಳನ್ನು ಮೇಯಿಸಿಲು ಗ್ರಾಮದ ಹೊರವಲಯದ ಕಾಡು ಪ್ರದೇಶಕ್ಕೆ ಮಹಿಳೆ ಹೋಗಿದ್ದರು. ಈ ವೇಳೆ, ಮಹಿಳೆಯನ್ನು ಕರೆದು ಲೈಂಗಿಕತೆಗೆ ಒಪ್ಪಿಕೊಳ್ಳುವಂತೆ ಆರೋಪಿ ಪ್ರೇರೆಪಿಸಿದ್ದಾನೆ ಎನ್ನಲಾಗ್ತಿದೆ. ಇದಕ್ಕೆ ಆಕೆ ಒಪ್ಪದ ಹಿನ್ನೆಲೆ ಕತ್ತಿನ ಭಾಗಕ್ಕೆ ಗಟ್ಟಿಯಾಗಿ ಹೊಡೆದ ಪರಿಣಾಮ, ಪಕ್ಕದಲ್ಲೇ ಇದ್ದ ಕಲ್ಲಿಗೆ ಬಿದ್ದು ನರಸಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

ಕಳೆದ 1 ವರ್ಷದ ಹಿಂದೆ ವೆಂಕಟೇಶ್ ಎಂಬಾತನ ಜೊತೆ ಮಹಿಳೆ ಬೆಂಗಳೂರಿಗೆ ಹೋಗಿ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಇತ್ತಿಚೇಗೆ ಮತ್ತೆ ಗ್ರಾಮಕ್ಕೆ ಬಂದ ವೆಂಕಟೇಶ್ ಮಹಿಳೆಯನ್ನು ಲೈಂಗಿಕವಾಗಿ ಬಳಕೆ ಮಾಡಲು ಪ್ರಚೋದಿಸುತ್ತಿದ್ದನು ಎನ್ನಲಾಗ್ತಿದೆ‌. ಇನ್ನು ಕಳೆದ ದಿನ ಒಬ್ಬಂಟಿಯಾಗಿ ಕಂಡ ಮಹಿಳೆಯನ್ನು ಮತ್ತೆ ಲೈಂಗಿಕತೆಗೆ ಪೀಡಿಸಿದ್ದು, ಒಪ್ಪದ ಹಿನ್ನೆಲೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.

ಇದನ್ನೂ ಓದಿ:ಹೆಬ್ಬಗೋಡಿಯ ಮನೆಯಲ್ಲಿ ಮಹಿಳೆ ಕೊಲೆ; ಗಂಡನಿಂದಲೇ ಕೃತ್ಯ ಶಂಕೆ

ಇದೇ ಸಮಯದಲ್ಲಿ ಕೋಪಗೊಂಡ ವೆಂಕಟೇಶ್ ಗಟ್ಟಿಯಾಗಿ ಮಹಿಳೆಯ ಗಂಟಲಿಗೆ ಹೊಡೆದ ಪರಿಣಾಮ, ಮಹಿಳೆ ಕಲ್ಲಿನ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಮಹಿಳೆಯ ಮೃತದೇಹವನ್ನು ಪಕ್ಕದ ಗಿಡಗಳ ಮಧ್ಯೆ ಎಸೆದು ಮನೆಗೆ ಹೋಗಿದ್ದಾನೆ. ಸಂಜೆಯ ನಂತರ ಕುರಿ - ಮೇಕೆಗಳು ಮಾತ್ರ ಮನೆಗೆ ಬಂದಿದ್ದು, ಮಹಿಳೆ ಮನೆಗೆ ಬಾರದ ಹಿನ್ನೆಲೆ ಕಳೆದ ರಾತ್ರಿ‌ 11ವರೆಗೂ‌ ಹುಡುಕಾಟ ನಡೆಸಲಾಗಿದೆ. ಗಿಡಗಳ ಮಧ್ಯೆ ಮೃತ‌ದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೆಂಕಟೇಶ್​ನನ್ನು ವಿಚಾರಣೆ ನಡೆಸಿದಾಗ, ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡು, ಅಪರಾಧಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details