ಕರ್ನಾಟಕ

karnataka

By

Published : Jul 20, 2020, 6:36 PM IST

ETV Bharat / state

ಹೆಚ್ಚುತ್ತಿರುವ ಕೊರೊನಾ ಭೀತಿ: ಅಲೀಪುರ ಗ್ರಾಮ ಸೀಲ್​ಡೌನ್​

ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮದಲ್ಲಿ ಭಾನುವಾರ 43 ಜನರ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ. ಗ್ರಾಮದಲ್ಲಿ ಸುಮಾರು ಎರಡು ಸಾವಿರ ಮನೆಗಳಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗ್ರಾಮವನ್ನು ಸೀಲ್​ಡೌನ್​ ಮಾಡಲಾಗಿದೆ.

ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮ ಸೀಲ್​ಡೌನ್​
ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮ ಸೀಲ್​ಡೌನ್​

ಚಿಕ್ಕಬಳ್ಳಾಪುರ: ಕಳೆದ‌ ದಿನವಷ್ಟೇ ಅಲೀಪುರ ಗ್ರಾಮದಲ್ಲಿ ಒಟ್ಟು 43 ಕೊರೊನಾ ಪ್ರಕಗಳು ದೃಢಪಟ್ಟ ಹಿನ್ನೆಲೆ ಗ್ರಾಮವನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ಭಾನುವಾರ 43 ಜನರ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ. ಸುಮಾರು ಎರಡು ಸಾವಿರ ಮನೆಗಳಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಗ್ರಾಮವನ್ನು ಸೀಲ್​ಡೌನ್​ ಮಾಡಲಾಗಿದೆ. ಬಹುತೇಕ‌ ಈ ಗ್ರಾಮಕ್ಕೆ ಹೊರದೇಶಗಳಿಂದ ಹೆಚ್ಚಿನ ಜನ ವ್ಯಾಪಾರಕ್ಕೆ ಬರುತ್ತಾರೆ. ಇದನ್ನು ಮಿನಿ ದುಬೈ ಎಂದು ಸಹಾ ಕರೆಯಲಾಗುತ್ತದೆ. ಸದ್ಯ ಗ್ರಾಮವನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದ್ದು, ಮನೆಯಿಂದ ಯಾರೂ ಹೊರಗೆ ಬರದಂತೆ ಜಿಲ್ಲಾಡಳಿತ ಸೂಚಿಸಿದೆ.

ಹೆಚ್ಚಾಗಿ ಹೊರ ದೇಶಗಳಲ್ಲಿ ವ್ಯಾಪಾರ ಮಾಡುವ ಹಾಗೂ ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತಿರುವ ಹವಳದ ವ್ಯಾಪಾರಸ್ಥರು ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಬೆಂಗಳೂರಿನಿಂದ ಗ್ರಾಮಕ್ಕೆ ಸೋಂಕು ಹರಡಿರುವ ಶಂಕೆಯನ್ನ ತಾಲೂಕು ಆಡಳಿತ ವ್ಯಕ್ತಪಡಿಸುತ್ತಿದೆ. ಗ್ರಾಮವನ್ನು ಸ್ಯಾನಿಟೈಸ್​ ಮಾಡಲಾಗಿದೆ. ಇದುವರೆಗೆ ಅಲೀಪುರ ಗ್ರಾಮದಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದು, 54 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details