ಕರ್ನಾಟಕ

karnataka

ಸುಪ್ರೀಂ ತೀರ್ಪಿನ ಬಳಿಕ 'ಸತ್ಯಹರಿಶ್ಚಂದ್ರ' ರಮೇಶ್​ ಕುಮಾರ್​ ಅಸಲಿಯತ್ತು ಬಯಲು: ಸುಧಾಕರ್​

By

Published : Aug 15, 2019, 6:20 PM IST

ನಮ್ಮ ಸತ್ಯ ಹರಿಶ್ಚಂದ್ರ ಸ್ಪೀಕರ್​​ ರಮೇಶ್​​ ಕುಮಾರ್​​ ಅವರ ತೀರ್ಪು ಏನು ಅಂತ ಸುಂಪ್ರೀಕೋರ್ಟ್​​ ನಿರ್ಣಯಿಸಲಿದೆ. ಸುಪ್ರೀಂ ತೀರ್ಪು ಬಂದ ನಂತರ ಯಾರು ಏನು ಎಂಬುದು ಎಲ್ಲರಿಗೂ ತಿಳಿಯಲಿದೆ ಎಂದು ಅನರ್ಹ ಶಾಸಕ ಸುಧಾಕರ್, ರಮೇಶ್​​ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ಸುಧಾಕರ್​

ಚಿಕ್ಕಬಳ್ಳಾಪುರ: ಸಂಸದ ಬಚ್ಚೇಗೌಡ ಹಾಗೂ ಅನರ್ಹ ಶಾಸಕ ಸುಧಾಕರ್ ಇಲ್ಲಿನ ಆವಲಗುರ್ಕಿಯ ನೂತನ ಗ್ರಾಮ ಪಂಚಾಯತಿ ಕಟ್ಟಡವನ್ನು ಉದ್ಘಾಟನೆ ಮಾಡಿದರು.

ಕಟ್ಟಡ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಮಹಾಘಟ ಬಂಧನ್ ನಡೆಯಿತು. ಆದರೆ ಗೆದ್ದಿದ್ದು ಮೊದಿ ಮಾತ್ರ. ಹಾಗೆಯೇ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆಲುವು ಖಚಿತವಾಗಿದ್ದು ವಿರೋಧಿಗಳು ಸೋಲಲಿದ್ದಾರೆ. ಪ್ರಧಾನಿ ಮೋದಿಯವರು ದೇಶಕ್ಕಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು ಭಾರತೀಯರೆಲ್ಲರು ಸಹಕಾರ ನೀಡಬೇಕಾಗಿದೆ ಎಂದರು.

ಸುಪ್ರೀಂ ತೀರ್ಪಿನ ಬಳಿಕ ಯಾರು ಅಸತ್ಯವಂತರು ತಿಳಿಯಲಿದೆ

ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಯಾರದು ತಪ್ಪು ಯಾರದು ಸರಿ ಎಂಬುದು ಗೋತಾಗಲಿದೆ. ಸತ್ಯ ಹರಿಚ್ಚಂದ್ರ ಎಂದು ಹೇಳಿಕೊಳ್ಳುತ್ತಿರುವ ರಮೇಶ್ ಕುಮಾರ್ ಅವರ ತೀರ್ಪು, ಸುಪ್ರೀಂ ತೀರ್ಪಿನ ನಂತರ ಗೋತ್ತಾಗಲಿದೆ. ಆಗ ಯಾರು ಸತ್ಯವಂತರು ಯಾರು ಅಸತ್ಯವಂತರು ಎಂಬುದು ಜನರಿಗೆ ತಿಳಿಯಲಿದೆ ಎಂದು ಮಾಜಿ ಸ್ಪೀಕರ್ ವಿರುದ್ದ ಕಿಡಿಕಾರಿದರು.

ಪೋನ್​ ಕದ್ದಾಲಿಕೆ ವಿಚಾರವಾಗಿ ಮಾತಾನಾಡಿದ ಸುಧಾಕರ್, ಆ ಕೆಸಲವನ್ನು ಯಾರೇ ಮಾಡಿದ್ರು ಅದು ಪರಮನೀಚದ ಕೆಲಸ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದರು.

ABOUT THE AUTHOR

...view details