ಚಿಕ್ಕಬಳ್ಳಾಪುರ: 5 ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಚುನಾವಣೆ ನಾಲಾಯಕ್ ಜನಪ್ರತಿನಿಧಿಗಳಿಂದಾಗಿ ಒಂದೂವರೆ ವರ್ಷಕ್ಕೆ ನಡೆಯುತ್ತಿದೆ ಎಂದು ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ಅನರ್ಹ ಶಾಸಕರು ಮತ್ತು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಅನರ್ಹ ಶಾಸಕರು ಜನಪ್ರತಿನಿಧಿಗಳಾಗಲಿಕ್ಕೆ ನಾಲಾಯಕ್: ಉಮಾಶ್ರೀ - ನಟಿ ಉಮಾಶ್ರೀ
ಯಾರದ್ರು ಸತ್ತರೆ ಉಪ ಚುನಾವಣೆ ಬರುತ್ತೆ. ಆದರೆ ಈಗ ರಾಜ್ಯದಲ್ಲಿ ಚುನಾವಣೆ ಬಂದಿದೆ. ಆದರೆ ಯಾರು ಸತ್ತಿಲ್ಲಾವಲ್ಲಾ ಎಂದು ಅನರ್ಹ ಶಾಸಕರ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ವಾಗ್ದಾಳಿ ನಡೆಸಿದರು.

ಅನರ್ಹ ಶಾಸಕರು ನಾಲಾಯಕ್ ರಾಜಕಾರಣಿಗಳು:ನಟಿ ಉಮಾಶ್ರೀ
ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಆಂಜಿನಪ್ಪ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಆಮಿಷ ಒಡ್ಡಿ ಶಾಸಕರ ರಾಜೀನಾಮೆ ಕೊಡಿಸಿದ್ದು, ಅನರ್ಹ ಶಾಸಕರು ಕೇವಲ ಮಾತಾನಾಡಲು ಸಾಧ್ಯ. ಅವರಿಂದ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ ನಮ್ಮ ಜೀವನದ ದೊಡ್ಡ ನಾಯಕ. ಒಂದು ಶಕ್ತಿ ಎಂದರು. ಅಲ್ಲದೆ ಸುಳ್ಳು ಹೇಳುವುದೇ ಬಿಜೆಪಿ ಕೆಲಸ. ಅವರ ಜೊತೆ ಸೇರಿದ ಮೇಲೆ ಸುಧಾಕರ್ಗೆ ಸುಳ್ಳು ಹೇಳೋ ಚಾಳಿ ಬಂದಿದೆ ಎಂದು ಕಿಡಿಕಾರಿದರು.
ಅನರ್ಹ ಶಾಸಕರು ಜನಪ್ರತಿನಿಧಿಗಳಾಗಲಿಕ್ಕೆ ನಾಲಾಯಕ್: ಉಮಾಶ್ರೀ
Last Updated : Nov 26, 2019, 5:58 PM IST