ಚಿಕ್ಕಬಳ್ಳಾಪುರ: ಉಪಚುನಾವಣೆಯ ಹಿನ್ನಲೆ ಕನ್ನಡ ಚಲಚಿತ್ರ ರಂಗದ ಸ್ಟಾರ್ ನಟ-ನಟಿಯರು ಈಗಾಗಲೇ ಡಾ. ಕೆ. ಸುಧಾಕರ್ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸಿದ್ದಾರೆ. ಈಗ ನಟ ಭುವನ್ ಪೊನ್ನಣ್ಣ ಸಹ ನಗರದಲ್ಲಿ ಬಿರುಸಿನ ಪ್ರಚಾರವನ್ನು ಶುರು ಮಾಡಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಮನೆ ಮನೆ ಪ್ರಚಾರ ನಡೆಸಿದ ಅವರು, ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆ ಮತ ನೀಡುವಂತೆ ಮನವಿ ಮಾಡಿದ್ರು. ಅಲ್ಲದೆ, ಡಾ. ಸುಧಾಕರ್ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ಪಡೆದು, ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಗೆಲ್ಲುವವರೆಗೂ ಮತಯಾಚನೆ ನಡೆಸುತ್ತೇನೆ. ಕನ್ನಡ ಚಿತ್ರರಂಗ ಸುಧಾಕರ್ ಪರ ಇದೆ ಎಂದರು.