ಚಿಕ್ಕಬಳ್ಳಾಪುರ:ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದ ಹಿನ್ನಲೆ ಸಾವಿರಾರು ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ರೆಡ್ಡಿದ್ಯಾವರಹಳ್ಳಿ ಗ್ರಾಮದ ಬಳಿ ನಡೆದಿದೆ.
ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಮನೆ - ಆಕಸ್ಮಿಕ ಬೆಂಕಿ
ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದ ಹಿನ್ನೆಲೆ ಮನೆಯಲ್ಲಿ ಇದ್ದ ಆಹಾರ ಪದಾರ್ಥಗಳು, ದಿನಬಳಕೆ ವಸ್ತುಗಳು ಸುಟ್ಟು ಭಸ್ಮವಾಗಿರುವ ಪರಿಣಾಮ, ಕುಟುಂಬ ಸಂಕಷ್ಟದಲ್ಲಿದೆ.
ಹೊತ್ತಿ ಉರಿದ ಮನೆ
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಸತ್ಯಪ್ಪ ಚಿಕ್ಕಗಂಗಮ್ಮ ನವರ ಮನೆಗೆ ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿ ಇದ್ದ ಆಹಾರ ಪದಾರ್ಥಗಳು, ದಿನಬಳಕೆ ವಸ್ತುಗಳು ಸುಟ್ಟು ಭಸ್ಮವಾಗಿರುವ ಪರಿಣಾಮ, ಕುಟುಂಬ ಸಂಕಷ್ಟದಲ್ಲಿದೆ. ಇನ್ನು ಈ ಕುಟುಂಬಕ್ಕೆ ಗ್ರಾಮ ಪಂಚಾಯತ್ನಿಂದ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.