ಚಿಂತಾಮಣಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಳಗೆ ಬಿದ್ದ ಟೊಮೆಟೊಗಳನ್ನು ಆರಿಸಿಕೊಳ್ಳಲು ಬಂದಿದ್ದ ಮಹಿಳೆಯ ಮೇಲೆ ಈಚರ್ ವಾಹನ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ನಗರದ ಜೆ.ಜೆ ಕಾಲೋನಿಯ ನಿವಾಸಿ ಗಂಗಮ್ಮ (55) ಮೃತ ದುರ್ದೈವಿ.
ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಳಗೆ ಬಿದ್ದಿರುವ ಟೊಮೆಟೊವನ್ನು ಮಹಿಳೆ ಆರಿಸಿಕೊಳ್ಳುವಾಗ ಈ ದುರ್ಘಟನೆ ನಡೆದಿದೆ. ಚಾಲಕ ತನ್ನ ವಾಹನ ಲೋಡ್ ಮಾಡಲು ಮುಂದೆ ಬಂದಾಗ ವಾಹನದ ಕೆಳಗೆ ಟೊಮೊಟೊ ಆರಿಸಿಕೊಳ್ಳುತ್ತಿದ್ದ ಮಹಿಳೆಯ ಮೇಲೆ ಮುಂದಿನ ಚಕ್ರ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.