ಚಿಕ್ಕಬಳ್ಳಾಪುರ:ಹೊಸ ವರ್ಷದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಆಟೋದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ 8ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಬಳಿ ನಡೆದಿದೆ.
ಚಿಂತಾಮಣಿ ಮೂಲದ 4 ಮಹಿಳೆಯರು, ಮೂವರು ಪುರುಷರು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿವೆ. ಕೈವಾರ ಕ್ಷೇತ್ರ ಕೈಲಾಸಗಿರಿ ಕ್ಷೇತ್ರದಿಂದ ಹಿಂತಿರುಗುವ ವೇಳೆ ಬನಹಳ್ಳಿ ಬಳಿ ಕುರಿಗಳು ಅಡ್ಡ ಬಂದ ಕಾರಣ ಆಯತಪ್ಪಿ ಆಟೋ ಪಲ್ಟಿಯಾಗಿದೆ. ಪರಿಣಾಮ, ಆಟೋದಲ್ಲಿದ್ದ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.