ಚಿಕ್ಕಬಳ್ಳಾಪುರ: ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನ ಎರಡೂ ಕಾಲು ಮುರಿದು ಸಹಾಯಕ್ಕೆ ಅಂಗಲಾಚಿದರೂ ಯಾರೊಬ್ಬರೂ ಸಹಾಯಕ್ಕೆ ಬರದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಚೇಳೂರು ಬಳಿ ನಡೆದಿದೆ.
ಚಿಕ್ಕಬಳ್ಳಾಪುರ: ಅಪಘಾತವಾಗಿ ನರಳುತ್ತಿದ್ದರೂ ಸಹಾಯಕ್ಕೆ ಬಾರದ ಜನ...! - Bike, collision between buses
ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಸಹಾಯಕ್ಕೆ ಅಂಗಲಾಚಿದರೂ ಯಾರೊಬ್ಬರೂ ತಕ್ಷಣ ಸಹಾಯ ಮಾಡದೆ ಅಮಾನವೀಯತೆ ತೋರಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಬಳಿ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ಅಪಘಾತ
ಚೇಳೂರು ಹೊರವಲಯದ ಕುರಿಸಂತೆಯ ಬಳಿ ಆಂಧ್ರಪ್ರದೇಶ ಕಡೆಯಿಂದ ಬರುತ್ತಿದ್ದ ಎಪಿಎಸ್ಆರ್‌ಟಿಸಿ ಬಸ್ ಸ್ಥಳೀಯ ನಿವಾಸಿ ಭಾಸ್ಕರ್ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಡಿಕ್ಕಿಯಾಗಿದೆ.
ಈ ವೇಳೆ ಯುವಕನ ಎರಡೂ ಕಾಲು ಮುರಿದು ಒದ್ದಾಡುತ್ತಿದ್ದ. ಅಲ್ಲಿದ್ದ ಜನ ಸಹಾಯ ಮಾಡದೇ ಮಾನವೀಯತೆ ಇಲ್ಲದಂತೆ ವರ್ತಿಸಿದ್ದಾರೆ.