ಕರ್ನಾಟಕ

karnataka

ETV Bharat / state

ಶಿಡ್ಲಘಟ್ಟದ ಬಳಿ ಅಪಘಾತ: ಜನ್ಮ ದಿನದಂದೇ ವಕೀಲ ಸಾವು - senior lawyer dead

ಅಪಘಾತವಾದ ಸ್ಥಳದಲ್ಲಿ ಒಂದು ಗಂಟೆಗೂ ಅಧಿಕ ಸಮಯ ಮಳೆಯಲ್ಲಿಯೇ ಮೃತದೇಹ ನೆನೆಯುವಂತಾಗಿದ್ದು, ಸಾರ್ವಜನಿಕರು ನೋಡಿಯು ನೋಡದ ಹಾಗೆ ಅಮಾನವೀಯತೆ ತೋರಿದ್ದಾರೆ.

ಕುಟುಂಬಸ್ಥರ ಆಕ್ರಂದನ

By

Published : Oct 7, 2019, 4:22 PM IST

ಚಿಕ್ಕಬಳ್ಳಾಪುರ: 46ನೇ ವರ್ಷದ ಹುಟ್ಟುಹಬ್ಬವನ್ನು ತನ್ನ ಕುಟುಂಬದೊಂದಿಗೆ ಆಚರಿಸಿಕೊಂಡು ಊರಿಗೆ ತೆರಳುವ ವೇಳೆ ದ್ವಿಚಕ್ರ ವಾಹನ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾದ ಪರಿಣಾಮ ಹಿರಿಯ ವಕೀಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂಭ್ರಮದ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ.

ಈ ಘಟನೆ ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ನಡೆದಿದ್ದು, ಬಿ.ನೌಶಾದ್ (46) ಮೃತ ದುರ್ದೈವಿ.

ಕುಟುಂಬಸ್ಥರ ಆಕ್ರಂದನ

ದಸರಾ ರಜೆ ಹಿನ್ನೆಲೆ ಬೆಳಿಗ್ಗೆ ಆಂಧ್ರ ಪ್ರದೇಶದ ಪುಂಗನೂರಿಗೆ ಬೈಕ್​​ನಲ್ಲಿ ತೆರಳುತ್ತಿದ್ದಾಗ ಶಿಡ್ಲಘಟ್ಟ ದಾರಿಯ ಹುಣಸೇನಹಳ್ಳಿ ತಿಣಕಲ್ಲು ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಆಗ ಮಳೆ ಬರುತ್ತಿತ್ತು. ಒಂದು ಗಂಟೆಗೂ ಅಧಿಕ ಸಮಯ ಮಳೆಯಲ್ಲಿಯೇ ಮೃತದೇಹ ನೆನೆಯುವಂತಾಗಿದ್ದು, ಸಾರ್ವಜನಿಕರು ನೋಡಿಯು ನೋಡದ ಹಾಗೆ ಅಮಾನವೀಯತೆ ತೋರಿದ್ದಾರೆ.

ನೌಶಾದ್​ 1982ರಿಂದ ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಪತ್ನಿ ಎಸ್.ಕೆ.ತಾಜುನ್ನೀಸಾ ನಿವೃತ್ತ ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ. ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯ ಮಗಳು ಬಿ.ನೌತಾಜ್ ಸಂರಕ್ಷಣಾಧಿಕಾರಿ, ಎರಡನೇ ಮಗಳು ಎನ್.ಚಾಂದಿನಿ ಇತ್ತೀಚೆಗಷ್ಟೇ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ABOUT THE AUTHOR

...view details