ಕರ್ನಾಟಕ

karnataka

ETV Bharat / state

ಬಸ್ ಹತ್ತುವ ವೇಳೆ ಅವಘಡ: ಕಾಲುಮುರಿದುಕೊಂಡು ನರಳಾಡಿದ ವಿದ್ಯಾರ್ಥಿನಿ

ಚಿಂತಾಮಣಿಯಲ್ಲಿ ಬಸ್​​ ಹತ್ತುವ ವೇಳೆ ನೂಕು ನುಗ್ಗಲಾಗಿ ವಿದ್ಯಾರ್ಥಿಯೋರ್ವಳು ಕೆಳಗೆ ಬಿದ್ದು ಬಸ್​ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಗಂಭೀರ ಗಾಯ

By

Published : Oct 22, 2019, 4:53 AM IST

ಚಿಕ್ಕಬಳ್ಳಾಪುರ:ವಿದ್ಯಾರ್ಥಿನಿ ಬಸ್ ಹತ್ತುವ ಆತುರದಲ್ಲಿ ಕೆಳಗೆ ಬಿದ್ದು ಕಾಲು ಮುರಿದುಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇಂದು‌ ವಿದ್ಯಾರ್ಥಿನಿ ಆಯಾ ತಪ್ಪಿ ಚಲಿಸುತ್ತಿರುವ ಬಸ್ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ಚಿಂತಾಮಣಿ ನಗರದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನೂಕುನುಗ್ಗಲಿನಲ್ಲಿ ಬಸ್ ಹತ್ತುವ ವೇಳೆ ಈ ಘಟನೆ ಸಂಭವಿಸಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ನಗರದ ಡೆಕ್ಕನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಲಾಗಿದೆ.


ಬಸ್​ನಿಂದ ಬಿದ್ದು ಕಾಲುಮುರಿದುಕೊಂಡ ವಿದ್ಯಾರ್ಥಿನಿ

ಚಿಂತಾಮಣಿಯ ಕೆಎಸ್​​ಆರ್​​ಟಿಸಿ ಬಸ್ ಸ್ಟಾಂಡ್​ನಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ನಡೆಸುತ್ತಿದ್ದು ಸರ್ಕಾರಿ ಬಸ್​ಗಳು ತಮ್ಮಿಷ್ಟವೆಂಬಂತೆ ಓಡಾಡುತ್ತವೆ. ಈ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲದಂತಾಗಿದೆ.

ABOUT THE AUTHOR

...view details