ಕರ್ನಾಟಕ

karnataka

ETV Bharat / state

ACB Raid : ಚಿಂತಾಮಣಿ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಮನೆಯಲ್ಲಿ ಚಿನ್ನ, ಅಪಾರ ಆಸ್ತಿ ದಾಖಲೆ ಪತ್ತೆ - ACB Raids on several places in state

ರಾಜ್ಯಾದ್ಯಂತ ಇಂದು ಎಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಭ್ರಷ್ಟರಿಗೆ ಶಾಕ್​ ಕೊಟ್ಟಿದ್ದಾರೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಮನೆ ಮೇಲೆ ದಾಳಿ‌ ನಡೆಸಿ ಚಿನ್ನಾಭರಣ, ಆಸ್ತಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ..

ACB Raids on Chintamani KMF officer Krishna Reddy house
ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಮನೆ ಮೇಲೆ ಎಬಿಸಿ ದಾಳಿ

By

Published : Nov 24, 2021, 2:39 PM IST

Updated : Nov 24, 2021, 7:42 PM IST

ಚಿಕ್ಕಬಳ್ಳಾಪುರ :ಬೆಳ್ಳಂಬೆಳ್ಳಗೆ ರಾಜ್ಯದೆಲ್ಲೆಡೆ ಎಸಿಬಿ ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಜಿಲ್ಲೆಯ ಚಿಂತಾಮಣಿಯ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಎಂಬುವರ ಮನೆ ಮೇಲೆ ದಾಳಿ‌ ನಡೆಸಲಾಗಿದೆ.

ಚಿಂತಾಮಣಿ ಕೆಎಂಎಫ್​ ಅಧಿಕಾರಿ ಕೃಷ್ಣಾ ರೆಡ್ಡಿ‌ ಮನೆ ಮೇಲೆ ಎಸಿಬಿ ದಾಳಿ

ಇಂದು ಡಿವೈಎಸ್ಪಿ ಸುಧೀರ್​ ,ಇನ್ಸ್‌ಪೆಕ್ಟರ್ ರವಿ ನೇತೃತ್ವದ ತಂಡ ಅಧಿಕಾರಿಯ ಮನೆಗೆ ದಾಳಿ ನಡೆಸಿ ಅನೇಕ ಗಂಟೆಗಳ ಕಾಲ ತಪಾಸಣೆ ನಡೆಸಿದೆ. ಈ ವೇಳೆ ಬೆಂಗಳೂರಿನಲ್ಲಿ ಎರಡು‌ ಸೈಟ್​​ನಲ್ಲಿ ‌5 ಮನೆಗಳ ನಿರ್ಮಾಣ, ಚಿಂತಾಮಣಿಯಲ್ಲಿ ಮೂರು ಮನೆ, 4 ಸೈಟ್​​​​ಗಳ ದಾಖಲೆಗಳು, ಒಂದು ಪೆಟ್ರೋಲ್ ಬಂಕ್ ಮಾಲೀಕತ್ವದ ದಾಖಲೆ ‌ಸೇರಿ ಮನೆಯಲ್ಲಿ 4 ಲಕ್ಷ ಹಣ, 300 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗೆ ಪ್ರಯತ್ನಿಸಿದ್ದ ಕೃಷ್ಣಾರೆಡ್ಡಿ, ಸದ್ಯ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನ.26ಕ್ಕೆ ಮತ್ತೊಂದು ಸುತ್ತಿನ ವಾಯುಭಾರ ಕುಸಿತ : ಮತ್ತೆ ಎದುರಾಯ್ತು ಮಳೆಯ ಆತಂಕ

Last Updated : Nov 24, 2021, 7:42 PM IST

ABOUT THE AUTHOR

...view details