ಚಿಕ್ಕಬಳ್ಳಾಪುರ: ಸುಟ್ಟು ಹೋಗಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಬದಲಿಸಿಕೊಡುವುದಕ್ಕೆ ಬೆಸ್ಕಾಂ ಕಿರಿಯ ಎಂಜಿನಿಯರ್ ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಎಸಿಬಿ ಬಲೆಗೆ ಬಿದ್ದಿರುವ ಪ್ರಕರಣದ ನಗರದಲ್ಲಿ ನಡೆದಿದೆ.
ಟ್ರಾನ್ಸ್ಫಾರ್ಮರ್ ಬದಲಿಸಲು ರೈತನಿಂದ ಲಂಚ ಪಡೆದ ಆರೋಪ: ಎಸಿಬಿ ಬಲೆಗೆ ಬಿದ್ದ ಅಧಿಕಾರಿ - ಲಂಚ ಸ್ವೀಕಾರ
ಸುಟ್ಟು ಹೋಗಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಬದಲಿಸಿಕೊಡುವುದಕ್ಕೆ ರೈತನಿಂದ ಲಂಚ ಸ್ವಿಕರಿಸಿದ ಆರೋಪದ ಮೇಲೆ ಬೆಸ್ಕಾಂ ಕಿರಿಯ ಎಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
![ಟ್ರಾನ್ಸ್ಫಾರ್ಮರ್ ಬದಲಿಸಲು ರೈತನಿಂದ ಲಂಚ ಪಡೆದ ಆರೋಪ: ಎಸಿಬಿ ಬಲೆಗೆ ಬಿದ್ದ ಅಧಿಕಾರಿ](https://etvbharatimages.akamaized.net/etvbharat/prod-images/768-512-4644262-thumbnail-3x2-belgum.jpg)
ACB officers raid bescom office
ಗ್ರಾಮೀಣ ವಿಭಾಗದ ಬೆಸ್ಕಾಂ ಕಿರಿಯ ಎಂಜಿನಿಯರ್ ಮಂಜುನಾಥ ನಾಯ್ಡು ಎಂಬುವರು ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ತಾಲೂಕಿನ ದೊಡ್ಡಕಿರುಂಗುಬಿ ರೈತ ಮಲ್ಲೇಶ್ ಕುಮಾರ್ ತಮ್ಮ ತೋಟದಲ್ಲಿ ಕಳೆದ 20 ದಿನಗಳ ಹಿಂದೆ ಸುಟ್ಟಿದ್ದ ಟಿಸಿ ಬದಲಾಯಿಸುವಂತೆ ಎಂಜಿನಿಯರ್ ಮಂಜುನಾಥ್ ಬಳಿ ಕೋರಿದ್ದರಂತೆ. ಇದಕ್ಕೆ ಮಂಜುನಾಥ 3 ಸಾವಿರ ಹಣ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಕಚೇರಿಯಲ್ಲಿ ರೈತನಿಂದ ಎರಡು ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಡಿವೈಎಸ್ಪಿ ವೆಂಕಟೇಶ ನಾಯ್ಡು ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ.