ಚಿಕ್ಕಬಳ್ಳಾಪುರ:ನಿವೃತ್ತ ಮುಖ್ಯ ಶಿಕ್ಷಕರರೊಬ್ಬರಿಂದ ಲಂಚ ಸ್ವೀಕರಿಸುವ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
6 ಸಾವಿರ ರೂ. ಲಂಚದಾಸೆಗೆ ಎಸಿಬಿ ಬಲೆಗೆ ಬಿದ್ದ ಪಿಡಿಒ - ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ
ಚಿಕ್ಕಬಳ್ಳಾಪುರ ಜಿಲ್ಲೆಯ ನಿವೃತ್ತ ಮುಖ್ಯ ಶಿಕ್ಷಕರರೊಬ್ಬರಿಂದ ಲಂಚ ಸ್ವೀಕರಿಸುವ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ. ಎನ್. ಲೋಕೇಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕರಾದ ಲಕ್ಷೀನಾರಾಯಣರವರ ಮನೆ ಇ-ಸ್ವತ್ತು ಪಡೆಯಲು ಸುಮಾರು ಒಂದು ತಿಂಗಳಿನಿಂದ ಪಂಚಾಯಿತಿ ಸುತ್ತ ಓಡಾಡಿದರು ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಆರೋಪಿ, ನಾನು ಇ-ಸ್ವತ್ತು ಕೊಡುತ್ತೇನೆ, 6000 ರೂಪಾಯಿ ಕೊಡು ಎಂದು ಬೇಡಿಕೆ ಇಟ್ಟಿದಾರೆ. ಮುಖ್ಯ ಶಿಕ್ಷಕರು ಲಕ್ಷ್ಮೀನಾರಾಯಣರವರು 4500 ರೂಪಾಯಿ ಲಂಚ ಕೊಡುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಸಿಪಿಐ ಲಕ್ಷ್ಮೀದೇವಿ ಮತ್ತು ಡಿವೈಎಸ್ಪಿ ವೆಂಕಟೇಶ್ ನಾಯ್ಡು ಮಾರ್ಗದರ್ಶನದಲ್ಲಿ ದಾಳಿ ಮಾಡಿ ಹಣ ಮತ್ತು ಗ್ರಾಮಪಂಚಾಯಿತಿ ಅಧಿಕಾರಿ ಸಮೇತ ಬಂಧಿಸಿದ್ದಾರೆ.