ಚಿಕ್ಕಬಳ್ಳಾಪುರ:ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಮಧ್ಯರಾತ್ರಿಯವರೆಗೂ ಹರಟೆ ಹೊಡೆಯುತ್ತಿದ್ದುದಕ್ಕೆ ಬುದ್ಧಿವಾದ ಹೇಳಿದ ಗ್ರಾಮಸ್ಥರಿಗೆ ಯುವಕ ಮಚ್ಚು ಹಿಡಿದು ದರ್ಪ ತೋರಿಸಿದ್ದಾನೆ. ಈ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಕುರಿತು ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು; ಮಚ್ಚು ಹಿಡಿದು ಯುವಕನ ದರ್ಪ - ಚಿಕ್ಕಬಳ್ಳಾಪುರ ಲೆಟೆಸ್ಟ್ ನ್ಯೂಸ್
ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮದ ಹರೀಶ್ ಎಂಬ ಯುವಕ ಏರ್ಪೋರ್ಟ್ ಕೆಲಸಕ್ಕೆ ಹೋಗುತ್ತಿದ್ದ. ಆದ್ರೆ, ಕೊರೊನಾ ಹಿನ್ನೆಲೆ ಆತನಿಗೆ ರಜೆ ನೀಡಿದ್ದ ಕಾರಣ ಗ್ರಾಮದ ಎಲ್ಲಾ ಯುವಕರನ್ನು ಸೇರಿಸಿಕೊಂಡು ರಾತ್ರಿ 12ರ ತನಕ ಅಶ್ವತ್ಥಕಟ್ಟೆ ಹಾಗೂ ರಸ್ತೆಯಲ್ಲಿ ಕೂರುತ್ತಿದ್ದ. ಹೀಗಾಗಿ ಊರಿನ ಕೆಲವರು ಆತನಿಗೆ ಬುದ್ಧಿವಾದ ಹೇಳಿದ್ದಾರೆ.
![ಕೊರೊನಾ ಕುರಿತು ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು; ಮಚ್ಚು ಹಿಡಿದು ಯುವಕನ ದರ್ಪ A young man behave rudely with people who suggest him as stay in home](https://etvbharatimages.akamaized.net/etvbharat/prod-images/768-512-6558060-thumbnail-3x2-ckbb.jpg)
ಕೊರೊನಾ ಕುರಿತು ಬುದ್ಧಿವಾದ ಹೇಳಿದ್ದಕ್ಕೆ ಮಚ್ಚು ಹಿಡಿದ ಯುವಕ
ಕೊರೊನಾ ಕುರಿತು ಬುದ್ಧಿವಾದ ಹೇಳಿದ್ದಕ್ಕೆ ಮಚ್ಚು ಹಿಡಿದ ಯುವಕ
ಕೊರೊನಾ ರೋಗ ಹರಡುವ ಭೀತಿಯಿದ್ದು ಜನರು ರಸ್ತೆಯಲ್ಲಿ ಗುಂಪು ಸೇರದೆ, ಮನೆಯಲ್ಲಿಯೇ ಇರಬೇಕು ಎಂದು ಹಿತ್ತಲಹಳ್ಳಿ ಗ್ರಾಮದ ಜಲಗಾರ ಗಂಗಾ ರೆಡ್ಡಿ ಎಂಬವರು ಯುವಕರಿಗೆ ಬುದ್ಧಿವಾದ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಯುವಕ ರೊಚ್ಚಿಗೆದ್ದು ಮಚ್ಚು ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸೋಕೆ ಶುರು ಮಾಡಿದ್ದಾನೆ.