ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಮೈ ಮೇಲೆ ದೇವರು ಬಂದಂತೆ ಹೈಡ್ರಾಮಾ ಮಾಡಿದ್ದಾರೆ. ವೇದಿಕೆ ಮುಂಭಾಗ ಕುಳಿತು ದೇವರು ಬಂದಂತೆ ಕಿರುಚಾಡಿರುವ ಘಟನೆ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.
ಮೈ ಮೇಲೆ ದೇವರು ಬಂದಂತೆ ಹೈಡ್ರಾಮಾ ಮಾಡಿದ ಮಹಿಳೆ ಇಂದು ಮುಷ್ಟೂರು ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ನಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಕಾರ್ಯಕ್ರಮದಲ್ಲಿ ಈ ಹೈಡ್ರಾಮಗಳು ನಡೆದಿದೆ.
ಸಚಿವ ಸುಧಾಕರ್ ಬಗ್ಗೆ ಅತಿಥಿಗಳು ಮಾತನಾಡಲು ಮುಂದಾಗಿದ್ದಾಗ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ವೇಳೆ ಮೈ ಮೇಲೆ ಓಂ ಶಕ್ತಿ ದೇವರು ಬಂದಂತೆ ಕೂಗಿ ಕಿರುಚಾಡಿ ವೇದಿಕೆ ಮುಂಭಾಗ ಸಚಿವರ ಬಳಿ ಹೋಗಲು ಯತ್ನಿಸಿದ್ದಾರೆ. ಈ ವೇಳೆ, ಅಲರ್ಟ್ ಆದ ಪೊಲೀಸರು ವೇದಿಕೆ ಬಳಿ ಹೊರಟ್ಟಿದ್ದ ಮಹಿಳೆ ತಡೆದು ವೇದಿಕೆ ಕೆಳಗೆ ನಿಲ್ಲಿಸಿದ್ದಾರೆ. ಕೆಳಗೆ ಕುಳಿತ ಮಹಿಳೆ ಜೋರಾಗಿ ನಗಲಾರಂಭಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಕೆಲವು ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಓದಿ:ನಾಲಿಗೆ ಕಟ್ ಮಾಡಿ ದೇವಿಗೆ ಅರ್ಪಿಸಿದ 20 ವರ್ಷದ ಯುವತಿ!