ಕರ್ನಾಟಕ

karnataka

ETV Bharat / state

ಇದ್ದಕ್ಕಿದ್ದಂತೆ ಮನೆಯ ಮಹಡಿ ಏರಿ ಆತಂಕ ಸೃಷ್ಟಿಸಿದ ಮಹಿಳೆ..! - Chikkaballapura latest news

ಚಿಂತಾಮಣಿಯಲ್ಲಿ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ಎರಡಂತಸ್ತಿನ ಮನೆಯ ಮಹಡಿ ಏರಿ ಸ್ಥಳೀಯರನ್ನು ಆತಂಕ್ಕಕ್ಕೆ ತಳ್ಳಿದ ಘಟನೆ ನಡೆಯಿತು.

A woman who created anxiety
ಆತಂಕ ಸೃಷ್ಟಿಸಿದ ಮಹಿಳೆ

By

Published : Jun 18, 2020, 8:57 PM IST

Updated : Jun 18, 2020, 11:19 PM IST

ಚಿಂತಾಮಣಿ (ಚಿಕ್ಕಬಳ್ಳಾಪುರ) :ವಾರ್ಡ್ ನಂ. 27ರ ಶಾಂತಿನಗರದಲ್ಲಿ ಸುಮಾರು 40 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಎರಡು ಅಂತಸ್ತಿನ ಮಹಡಿ ಏರಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇಂದು ಸಂಜೆ ನಡೆದಿದೆ.

ನಗರದ ಹಲವು ಬೀದಿಗಳನ್ನು ಸುತ್ತಾಡಿದ ಅಪರಿಚಿತ ಮಹಿಳೆಯು ಕೊನೆಗೆ ಎರಡು ಅಂತಸ್ತಿನ ಮಹಡಿ ಏರಿ ಅಲ್ಲಿಯೇ ನಿಂತು ಆತಂಕ ಸೃಷ್ಟಿ ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ಸ್ಥಳೀಯರು ಮಹಡಿ ಏರಿ ಆಕೆಯನ್ನು ಕೆಳಗಿಳಿಯುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಮಹಿಳೆ ಮೌನವಾಗಿಯೇ ಇದ್ದಳು.

ಇದ್ದಕ್ಕಿದ್ದಂತೆ ಮನೆಯ ಮಹಡಿ ಏರಿ ಆತಂಕ ಸೃಷ್ಟಿಸಿದ ಮಹಿಳೆ

ನಂತರ ಉಪಾಯದಿಂದ ಆಕೆಯನ್ನು ಕೆಳಗಿಳಿಸುವಲ್ಲಿ ಸ್ಥಳೀಯರು ಯಶಸ್ವಿಯಾದರು. ಕೆಳಗಿಳಿಸಿದ ಬಳಿಕ ತನಗೇನೂ ಗೊತ್ತಿಲ್ಲವೆಂಬಂತೆ ಮಹಡಿಯ ಮೇಲಿಂದ ಇಳಿದ ಮಹಿಳೆ ತನ್ನ ಪಾಡಿಗೆ ಹೋರಟು ಹೋಗುವ ಮೂಲಕ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದಳು.

Last Updated : Jun 18, 2020, 11:19 PM IST

ABOUT THE AUTHOR

...view details