ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ದಿನದಂದು ಸುಮಾರು 11 ಗಂಟೆಯಿಂದ ಸರಿಸುಮಾರು ಎರಡು ತಾಸು ಹೆಚ್ಚಿನ ಕಾಲ ಸೂರ್ಯ ವಿಸ್ಮಯಕಾರಿಯಾಗಿ ಕಂಗೊಳಿಸಿದ್ದಾನೆ.
ಯುಗಾದಿ ಹಬ್ಬದ ದಿನದಂದು ಸೂರ್ಯನ ಸುತ್ತ ಮೂಡಿದ ಉಂಗುರ - ಚಿಕ್ಕಬಳ್ಳಾಪುರ ಯುಗಾದಿ ಆಚರಣೆ,
ಯುಗಾದಿ ಹಬ್ಬದ ದಿನದಂದು ಸೂರ್ಯನ ಸುತ್ತ ಉಂಗುರ ಮೂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಕಂಡು ಬಂದಿದೆ.
ಯುಗಾದಿ ಹಬ್ಬದ ದಿನದಂದು ಸೂರ್ಯನ ಸುತ್ತ ಮೂಡಿದ ಉಂಗುರ
ಹೌದು, ಘನೀಕೃತ ನೀರಿನ ಕಣಗಳ (ಮಂಜುಗಡ್ಡೆ) ಮೂಲಕ ಬೆಳಕು ಹಾದು ಹೋದಾಗ ಉಂಟಾಗುವ ಈ ಸಾಮಾನ್ಯ ವಿದ್ಯಮಾನಕ್ಕೆ ‘22 ಡಿಗ್ರಿ ಹ್ಯಾಲೋ’ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಮೋಡಗಳು ಚಲಿಸುತ್ತ ಸೂರ್ಯನ ಸುತ್ತ ಬಂದಾಗ ಈ ರೀತಿ ಕಾಣಿಸುವ ಸಾಧ್ಯತೆಯಿದೆ.
‘ವರ್ಷದಲ್ಲಿ ಎಷ್ಟು ಸಲ ಬೇಕಾದರೂ ಈ ರೀತಿಯ ಉಂಗುರದ ಮಾದರಿಯ ರಚನೆಗಳಾಗಬಹುದು. ಇದಕ್ಕೆ ವಾತಾವರಣವೇ ಕಾರಣ. ಘನೀಕೃತ ನೀರಿನ ಮೂಲಕ ಬೆಳಕು ಹಾದುಹೋದಾಗ ಬೆಳಕಿನ ವಿಭಜನೆಯಾಗುತ್ತದೆ. ಆಗ ಕಾಮನಬಿಲ್ಲಿನ ರೀತಿಯಲ್ಲೇ ಸೂರ್ಯನ ಸುತ್ತ ರಚನೆಯೊಂದು ಗೋಚರಿಸುತ್ತದೆ. ಇನ್ನು ಈ ಸನ್ನಿವೇಶ ಹಬ್ಬದಲ್ಲಿ ನಡೆದಿರುವುದರಿಂದ ಅಚ್ಚರಿಗೆ ಕಾರಣವಾಯಿತು.