ಚಿಕ್ಕಬಳ್ಳಾಪುರ:ರಾಜ್ಯದಲ್ಲಿ ಮಕ್ಕಳ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹೇಳಿಕೆಗಳು ಬರುತ್ತಿರುವ ನಿಟ್ಟಿನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಶುರುವಾಗಿದ್ದವು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೈಲಾಪುರ ಸರ್ಕಾರಿ ಶಾಲೆ ಉತ್ತಮ ಶಿಕ್ಷಣ, ಪರಿಸರದೊಂದಿಗೆ ಅಧಿಕ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕಲಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಶಾಲೆಯಲ್ಲಿ ಹೆಣ್ಮಕಳೇ ಸ್ಟ್ರಾಂಗ್, ಜೊತೆಗೆ ಶಾಲೆಯಲ್ಲಾ ಹಸಿರೇ ಹಸಿರು.. - ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೈಲಾಪುರ ಸರ್ಕಾರಿ ಶಾಲೆ ಉತ್ತಮ ಶಿಕ್ಷಣ, ಪರಿಸರದೊಂದಿಗೆ ಅಧಿಕ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕಲಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿಂತಾಮಣಿಯ ಕೈವಾರ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಲಾಪುರ ವಿಸ್ತೀರ್ಣದಲ್ಲಿ ಚಿಕ್ಕದಾಗಿದೆ. ಈ ಶಾಲೆಯಲ್ಲಿ ಒಟ್ಟು 48 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದು, ಅದರಲ್ಲಿ 33 ಮಕ್ಕಳು ಬಾಲಕಿಯರೇ ಆಗಿದ್ದಾರೆ. ಚಿಕ್ಕದಾದ ಶಾಲೆಯ ಆವರಣದಲ್ಲಿ ಮಕ್ಕಳೇ ಗಿಡಗಳನ್ನು ಬೆಳೆಸಿ, ತಮ್ಮ ಮನೆಗಳಿಂದ ಗೊಬ್ಬರವನ್ನು ತಂದು 30ಕ್ಕೂ ಹೆಚ್ಚು ವಿವಿಧ ಗಿಡಗಳ ಪೋಷಣೆ ಮಾಡಿ ಬೆಳೆಸುತ್ತಿದ್ದಾರೆ. ಅದೇ ರೀತಿ ಶಾಲೆಯ ಆವರಣದಲ್ಲಿ ಕಸ ವಿಂಗಡನೆಯನ್ನು ಮಾಡಿ ಗೊಬ್ಬರವನ್ನಾಗಿ ಮಾಡುತ್ತಾರೆ. ಕಸದ ರಾಶಿಯಲ್ಲಿ ಪ್ಲಾಸ್ಟಿಕ್, ಕಾಗದಗಳನ್ನು ಬೇರ್ಪಡಿಸಿ ಮಾರಾಟ ಮಾಡಿ, ಬಂದ ಹಣದಲ್ಲಿ ಸಿಹಿ ತಂದು ಹಂಚಿಕೊಳ್ಳುತ್ತಾರೆ.
ಗ್ರಾಮದ ಜನರೂ ಕೂಡ ಶಾಲೆಯ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಣವನ್ನು ಸಂಗ್ರಹಿಸಿ, ಶಾಲೆಯ ಆವರಣದಲ್ಲಿ ಗಣಪನ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಇದರ ಸಲುವಾಗಿಯೇ 2017ರಲ್ಲಿ ಮೈಲಾಪುರ ಶಾಲೆ ಹಳದಿ ಪ್ರಶಸ್ತಿಗೆ ಪಾತ್ರವಾಗಿದೆ.
TAGGED:
ಚಿಕ್ಕಬಳ್ಳಾಪುರ