ಕರ್ನಾಟಕ

karnataka

ETV Bharat / state

ಬಾಗೇಪಲ್ಲಿ: ಅಕ್ರಮವಾಗಿ ಕಲ್ಲು ಸಾಗಿಸುವಾಗ ಟ್ರ್ಯಾಕ್ಟರ್​ ಪಲ್ಟಿ, ಕಾರ್ಮಿಕ ಸಾವು - ಚಿಕ್ಕಬಳ್ಳಾಪುರ ಅಪರಾಧ ಸುದ್ದಿ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವರ್ಣಮಪಲ್ಲಿ ಬಳಿ ಕಲ್ಲು ಬಂಡೆಗಳನ್ನು ಸಾಗಿಸುವ ವೇಳೆ ಕೂಲಿ ಕಾರ್ಮಿಕ ಮೃತಪಟ್ಟಿದ್ದಾನೆ.

ಮೃತಪಟ್ಟ ಕೂಲಿ ಕಾರ್ಮಿಕ

By

Published : Nov 25, 2019, 9:55 AM IST

ಚಿಕ್ಕಬಳ್ಳಾಪುರ:ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವರ್ಣಮಪಲ್ಲಿ ಬಳಿ ಕಲ್ಲು ಬಂಡೆಗಳನ್ನು ಸಾಗಿಸುವ ವೇಳೆ ಕೂಲಿ ಕಾರ್ಮಿಕ ಮೃತಪಟ್ಟಿದ್ದಾನೆ.

ಅಕ್ರಮ ಗಣಿಗಾರಿಕೆ ಸಂದರ್ಭದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕ

ಬಾಗೇಪಲ್ಲಿ ತಾಲೂಕಿನ ಕಡಪಲ್ಲಿ ಗ್ರಾಮದ ವ್ಯಕ್ತಿ ರಾಮಲಿಂಗಾರೆಡ್ಡಿ (36) ಮೃತ. ತಾಲೂಕಿನ ವರ್ಣಮಪಲ್ಲಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಬೆಟ್ಟದ ಮೇಲಿಂದ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಈ ಘಟನೆ ಸಂಭವಿಸಿದೆ.ಇನ್ನು ಈ ಪ್ರಕರಣ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ABOUT THE AUTHOR

...view details