ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ಯುವಕನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಜಿಲ್ಲೆಯ ಗೌರಿಬಿನದೂರು ತಾಲೂಕಿನ ಕಲ್ಲನಾಯ್ಕನಹಳ್ಳಿ ಬಳಿ ನಡೆದಿದೆ.
ಹಲ್ಲೆಗೊಳಗಾಗಿ ಗಾಯಗೊಂಡಿರುವ ಫಿರೋಜ್ ಹಲ್ಲೆಗೊಳಗಾದ ಯುವಕ ಬಸವಾಪುರ ಗ್ರಾಮದ ನಿವಾಸಿ ಫಿರೋಜ್ ಖಾನ್ (26) ಎಂದು ತಿಳಿದು ಬಂದಿದೆ. ಕಲ್ಲನಾಯ್ಕನಹಳ್ಳಿ ಗ್ರಾಮದ ನಿವಾಸಿ ಗಂಗಾಧರ ನಿನ್ನೆ ರಾತ್ರಿ ಫೋನ್ ಮಾಡಿ ದೊಡ್ಡಬಳ್ಳಾಪುರಕ್ಕೆ ಹೋಗೋಣ ಬಾ ಎಂದು ಕರೆದಿದ್ದಾನೆ. ಈ ವೇಳೆ ಮಾತುಕತೆ ಶುರುಮಾಡಿದ ಆತ ಚಾಕುವಿನಿಂದ ಫಿರೋಜ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಬಳಿಕ ಆತ ಮೃತಪಟ್ಟಿದ್ದಾನೆ ಎಂದುಕೊಂಡು ಗಂಗಾಧರ್ ಆತನನ್ನು ಪಕ್ಕದ ಬೇಲಿಗೆಸೆದು ಮನೆಗೆ ಹೊರಟು ಹೋಗಿದ್ದ.
ತೀವ್ರ ಸ್ವರೂಪದ ಗಾಯಗಳಾದ ಫಿರೋಜ್ ರಾತ್ರಿಯಿಡೀ ನರಳಾಡಿದ್ದಾನೆ. ಬೆಳಗ್ಗೆ ಗ್ರಾಮಸ್ಥರು ಬಯಲು ಬಹಿರ್ದೆಸೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದ್ದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್‌ಪಿ ರವಿಶಂಕರ್ ಹಾಗೂ ಸಿಪಿಐ ಶಶಿಧರ್ ಭೇಟಿ ನೀಡಿದ್ದು ಆರೋಪಿ ಗಂಗಾಧರನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಹಲ್ಲೆಗೊಳಗಾದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಅಕ್ರಮ ಸಂಬಂಧವೇ ಕಾರಣ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಹರಿದ ನೆತ್ತರು : ಗ್ರಾಪಂ ಅಧ್ಯಕ್ಷನ ವಿರುದ್ಧ ಕೊಲೆ ಆರೋಪ