ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಸರ್ಕಾರಿ ಕಚೇರಿಯಲ್ಲಿ ನೇಣಿಗೆ ಶರಣಾದ ವ್ಯಕ್ತಿ

ಕಚೇರಿಯಲ್ಲಿ ಕಸ ಗುಡಿಸಲು ದಿನಗೂಲಿ ನೌಕರನಾಗಿ ನೇಮಕವಾಗಿದ್ದ ಶಿಡ್ಲಘಟ್ಟ ನಗರದ ಎಡಿ ಕಾಲೋನಿ ನಿವಾಸಿಯೊಬ್ಬ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

man who committed suicide in government office
ನೇಣಿಗೆ ಶರಣಾದ ವ್ಯಕ್ತಿ

By

Published : Jan 27, 2021, 12:56 PM IST

ಚಿಕ್ಕಬಳ್ಳಾಪುರ: ವ್ಯಕ್ತಿವೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ನಡೆದಿದೆ.

ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ನೇಣಿಗೆ ಶರಣಾದ ವ್ಯಕ್ತಿ

ಕಚೇರಿಯಲ್ಲಿ ಕಸ ಗುಡಿಸಲು ದಿನಗೂಲಿ ನೌಕರನಾಗಿ ನೇಮಕವಾಗಿದ್ದ ಶಿಡ್ಲಘಟ್ಟ ನಗರದ ಎಡಿ ಕಾಲೋನಿ ನಿವಾಸಿ ಲಕ್ಷ್ಮಿಪತಿ (28) ನೇಣಿಗೆ ಶರಣಾದ ವ್ಯಕ್ತಿ. ಮೃತ ಲಕ್ಷ್ಮಿಪತಿ ಆಟೋ ಓಡಿಸಿಕೊಂಡು ಮತ್ತು ರೇಷ್ಮೆ ಬಿತ್ತನೆ ಕೋಠಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಮದ್ಯ ವ್ಯಸನಿಯಾಗಿದ್ದ ಎನ್ನಲಾಗ್ತಿದೆ.

ನಿನ್ನೆ ಸಂಜೆ ಮನೆ ಬಳಿ ತಮ್ಮನೊಂದಿಗೆ ಜಗಳವಾಡುತ್ತಿದ್ದ ಲಕ್ಷ್ಮಿಪತಿಯನ್ನು ರೇಷ್ಮೆ ಬಿತ್ತನೆ ಕೋಠಿಯಲ್ಲಿ ನೈಟ್ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸ್ನೇಹಿತ ಮುರಳಿಕೃಷ್ಣ ಬಿತ್ತನೆ ಕೋಠಿಗೆ ಕರೆ ತಂದಿದ್ದ. ಲಕ್ಷ್ಮಿಪತಿ ಕಚೇರಿಯಲ್ಲಿ ಮಲಗುವುದಾಗಿ ಹೇಳಿದ ಹಿನ್ನೆಲೆ ಆತನನ್ನು ಕಚೇರಿಯಲ್ಲೇ ಬಿಟ್ಟು ಮುರಳಿ ಕೃಷ್ಣ ಊಟ ತರುತ್ತೇನೆಂದು ಹೊರಗೆ ಬಂದಿದ್ದಾನೆ. ವಾಪಸ್ ಬಂದು ನೋಡಿದಾಗ ಲಕ್ಷ್ಮಿಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಈ ಕುರಿತು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details