ಚಿಕ್ಕಬಳ್ಳಾಪುರ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕನಿಗೆ ಮಹಿಳೆಯೇ ಚೆನ್ನಾಗಿ ಹೊಡೆದು ಬುದ್ದಿ ಕಲಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಜಮೀನಿನಲ್ಲಿ ಲೈಂಗಿಕ ದೌರ್ಜನ್ಯ: ಕಳೆ ಕೀಳುವ ಸಲಕರಣೆಯಿಂದ ಹೊಡೆದು ಕಾಮುಕನಿಂದ ಪಾರಾದ ಮಹಿಳೆ - ckb crime news
ಮಹಿಳೆ ಜಮೀನಿನಲ್ಲಿ ಕೆಲಸ ಮಾಡುವಾಗ ಕಾಮುಕ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ. ಈ ವೇಳೆ ಆಕೆ ಆತನ ಮೇಲೆ ಹಲ್ಲೆ ನಡೆಸಿ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಜಮೀನಿನಲ್ಲಿರುವಾಗ ಲೈಂಗಿಕ ದೌರ್ಜನ್ಯಕ್ಕೆ ಯತ್ನ
ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಸೇರಿದ ಗ್ರಾಮವೊಂದರಲ್ಲಿ ಮಹಿಳೆಯೋರ್ವಳು ಹೊಲದಲ್ಲಿ ಕಳೆ ಕೀಳುವ ವೇಳೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಕಾಮುಕನಿಂದ ಮಹಿಳೆ ಪಾರಾಗಿದ್ದಾಳೆ. ಕಳೆ ಕೀಳುವ ವೇಳೆ ಅದೇ ಗ್ರಾಮದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಕೈಯಲ್ಲಿದ್ದ ಕಳೆ ಕೀಳುವ ವಸ್ತುವಿನಿಂದ ತಲೆಗೆ ಹೊಡೆದು ಓಡಿ ಹೋಗಿ ಬಚಾವಾಗಿದ್ದಾಳೆ.
ಘಟನೆಯ ನಂತರ ಮಹಿಳೆಯ ಸಂಬಂಧಿಕರು ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.