ಕರ್ನಾಟಕ

karnataka

ETV Bharat / state

ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ: ವ್ಯಕ್ತಿಗೆ ಚಾಕು ಇರಿತ - ಚಾಕುವಿನಿಂದ ಇರಿದ ಘಟನೆ

ತೀವ್ರ ಗಾಯಗೊಂಡ ಅರ್ಜುನ್​​ಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಮಾರಾಣಾಂತಿಕ ಹಲ್ಲೆ ಮಾಡಿದ ವೆಂಕಟೇಶ್ ಪರಾರಿಯಾಗಿದ್ದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

a-man-stabbed-a-person-who-alleges-her-wifes-affair
ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ: ವ್ಯಕ್ತಿಗೆ ಚಾಕು ಇರಿತ

By

Published : Feb 20, 2021, 7:55 PM IST

ಚಿಕ್ಕಬಳ್ಳಾಪುರ:ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊದ್ದಿದ್ದ ಎಂದು ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ತಾಲೂಕಿನ ಮೈಲಾಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೈಲಾಪನಹಳ್ಳಿ ಗ್ರಾಮದ ನಿವಾಸಿ ಅರ್ಜುನ್ (28) ಅದೇ ಗ್ರಾಮದ ವೆಂಕಟೇಶ್​​ ಎಂಬಾತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದ್ದಿದ್ದ ಎಂದು ಶಂಕಿಸಲಾಗಿದೆ.

ಈ ಹಿನ್ನೆಲೆ ಬೇಸತ್ತಿದ್ದ ವೆಂಕಟೇಶ್​, ಅರ್ಜುನ್ ಮೇಲೆ ದ್ವೇಷ ಬೆಳಸಿಕೊಂಡಿದ್ದ. ಇಂದು ಚಾಕುವಿನಿಂದ ಹಲ್ಲೆ ನಡೆಸಿದ್ದು, ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಆಳವಾದ ಗಾಯವಾಗಿದೆ. ತೀವ್ರ ಗಾಯಗೊಂಡ ಅರ್ಜುನ್​​ಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಮಾರಾಣಾಂತಿಕ ಹಲ್ಲೆ ಮಾಡಿದ ವೆಂಕಟೇಶ್ ಪರಾರಿಯಲ್ಲಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಪ್ರೀತಿ ಒಪ್ಪದಿದ್ದಕ್ಕೆ ಕುಡಿಯೋ ನೀರಲ್ಲಿ ಕೀಟನಾಶಕ ಬೆರೆಸಿ ದಲಿತ ಬಾಲಕಿಯರ ಕೊಲೆ: ಆರೋಪಿಗಳ ಸೆರೆ

ABOUT THE AUTHOR

...view details