ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ವ್ಯಾಪಾರಿ - Rape on beggar in chikballapura

ಘಟನಾ ಸ್ಥಳಕ್ಕೆ ಎಸ್​ಪಿ ಮಿಥುನ್ ಕುಮಾರ್ (SP Mithun kumar) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ..

A man raped and killed the woman in chikballapur
ಲೆ ಅತ್ಯಾಚಾರವೆಸೆಗಿ ಕೊಲೆ ಮಾಡಿದ ವ್ಯಾಪಾರಿ

By

Published : Nov 12, 2021, 6:55 PM IST

ಚಿಕ್ಕಬಳ್ಳಾಪುರ: ಭಿಕ್ಷುಕಿ ಮೇಲೆಅತ್ಯಾಚಾರವೆಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.

ನಗರಸಭೆಯ ಮೀನು-ಮಾಂಸ ಮಾರಾಟ ಮಳಿಗೆಗೆಳ ಸಂಕೀರ್ಣದ ಬಳಿ 40 ವರ್ಷದ ಭಿಕ್ಷುಕಿ ಮಲಗಿದ್ದ ವೇಳೆ ಮಾರುಕಟ್ಟೆ ಸಂಕೀರ್ಣದಲ್ಲಿ (Market complex) ವ್ಯಾಪಾರ ಬಂಡಿಯನ್ನು ಇಟ್ಟುಕೊಂಡು ಚಕ್ಕೆಲವಂಗ ಮಾರಾಟ ಮಾಡುತ್ತಿದ್ದ ಅಬ್ದುಲ್ಲಾ ಎಂಬಾತ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸದ್ಯ ಆರೋಪಿಯ ಕೃತ್ಯಗಳು ಸಿಸಿ ಟಿವಿಯಲ್ಲಿ (CC TV) ಸೆರೆಯಾಗಿವೆ. ನಿದ್ರೆಯಲ್ಲಿದ್ದ ವೇಳೆ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಎಚ್ಚರಗೊಂಡ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಕ್ಕೆ, ಗಂಭೀರವಾಗಿ ಗಾಯಗೊಳಿಸಿ ಅತ್ಯಾಚಾರ (Rape) ಮಾಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಭಿಕ್ಷುಕಿ ಸಾವಿಗೀಡಾಗಿದ್ದಾಳೆ.

ಘಟನಾ ಸ್ಥಳಕ್ಕೆ ಎಸ್​ಪಿ ಮಿಥುನ್ ಕುಮಾರ್ (SP Mithun kumar) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details