ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕಾಗಿ ಬಾಮೈದುನನೇ ಬಾವನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಇಬ್ಬರೂ ದುಡಿಯೋಕೆಂದು ಬಂದಿದ್ದರು.. ಆದರೆ, ಬಾಮೈದುನನೇ ಬಾವನ ಕೊಲೆ ಮಾಡಿಬಿಟ್ಟ - ಚಿಕ್ಕಬಳ್ಳಾಪುರ
ಇಬ್ಬರ ಮಧ್ಯೆ ಅದ್ಯಾವ್ ಕಾರಣಕ್ಕೆ ಮನಸ್ತಾಪವಾಯ್ತೋ ಏನೋ.. ದುಡಿದು ತಿನ್ನಬೇಕೆಂದು ಆಂಧ್ರದಿಂದ ಬಂದಿದ್ದರು. ಆದರೆ, ಈಗ ಬಾಮೈದುನನೇ ಬಾವನ ಕೊಲೆ ಮಾಡಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಭಾವನಿಂದಲೇ ಭಾಮೈದನ ಬರ್ಬರ ಕೊಲೆ
ಬಾಮೈದಾ ಕೊಂಡಪ್ಪ ಎಂಬಾತ ತನ್ನ ಬಾವನಾದ ಮಾಲಕೊಂಡಪ್ಪ(37) ಎಂಬುವನನ್ನು ಹತ್ಯೆ ಮಾಡಿದ್ದಾನೆ. ಆಂಧ್ರ ಮೂಲದ ಇಬ್ಬರೂ ಕೆಲಸಕ್ಕಾಗಿ ಗೌರಿಬಿದನೂರಿಗೆ ಆಗಮಿಸಿದ್ದು, ಇಲ್ಲಿಯೇ ನೆಲೆಸಿದ್ದರೂ ಎನ್ನಲಾಗಿದೆ. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಕಂಡಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಭುಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : May 10, 2019, 5:04 PM IST
TAGGED:
ಚಿಕ್ಕಬಳ್ಳಾಪುರ