ಕರ್ನಾಟಕ

karnataka

ETV Bharat / state

ಬೆಂಗಳೂರು ಪಕ್ಕದಲ್ಲೊಂದು ಸ್ವರ್ಗ: ಬೆಳಗಿನ ಜಾವ ನಂದಿ ಬೆಟ್ಟದಲ್ಲಿ ಜನ ಸಾಗರ - Etv Bharat Kannada news

ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಿದ್ದಾರೆ.

a-large-number-of-tourists-are-coming-to-nandi-hills
ಬೆಂಗಳೂರು ಪಕ್ಕದಲ್ಲೊಂದು ಸ್ವರ್ಗ:ಬೆಳಗ್ಗಿನ ಜಾವ ನಂದಿ ಬೆಟ್ಟದಲ್ಲಿ ಜನ ಸಾಗರ

By

Published : Aug 8, 2022, 7:42 AM IST

ಚಿಕ್ಕಬಳ್ಳಾಪುರ: ಒಂದೆಡೆ ಎಲ್ಲಡೆ ಹರಡಿರುವ ಮಂಜಿನ ಮೋಡಗಳು, ಇನ್ನೊಂದೆಡೆ ಚುಮು ಚುಮು ಚಳಿಯಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಿರುವ ಪ್ರವಾಸಿಗರು. ಈ ದೃಶ್ಯ ಕಂಡು ಬರುತ್ತಿರುವುದು ವಿಶ್ವವಿಖ್ಯಾತ ಚಿಕ್ಕಬಳ್ಳಾಪುರ‌ದ ನಂದಿಗಿರಿಧಾಮದಲ್ಲಿ. ವಾರಾಂತ್ಯದಲ್ಲಿ ಎಂಜಾಯ್ ಮಾಡಲು ಜನರು ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಒಂದು ದಿನದ ಪ್ರವಾಸದ ಯೋಜನೆ ಹಾಕುವವರಿಗೆ ನಂದಿ ಗಿರಿಧಾಮ ಮೊದಲ ಆಯ್ಕೆಯಾಗಿದೆ.

ಬೆಂಗಳೂರು ಪಕ್ಕದಲ್ಲೊಂದು ಸ್ವರ್ಗ:ಬೆಳಗ್ಗಿನ ಜಾವ ನಂದಿ ಬೆಟ್ಟದಲ್ಲಿ ಜನ ಸಾಗರ

ತುಂತುರು ಮಳೆಯ ನಡುವೆಯೂ ಪ್ರವಾಸಿಗರು ನಂದಿಗಿರಿಧಾಮಕ್ಕೆ ಆಗಮಿಸುತ್ತಿದ್ದಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯ ಆನಂದಿಸುತ್ತಿದ್ದಾರೆ. ಜೊತೆಗೆ ಕೆಲವರು ಟ್ರೆಕ್ಕಿಂಗ್ ಮೂಲಕ ನಂದಿ ಬೆಟ್ಟಕ್ಕೆ ಆಗಮಿಸಿ ತಮ್ಮ ವೀಕೆಂಡ್ ನ್ನು ಎಂಜಾಯ್ ಮಾಡುತ್ತಿದ್ದಾರೆ.

ಬಡವರ ಪಾಲಿನ ಊಟಿ ಎಂದೇ ಪ್ರಸಿದ್ಧಿ ಪಡೆದಿರುವ ನಂದಿ ಗಿರಿಧಾಮಕ್ಕೆ ರಾಜ್ಯದ ಮೂಲೆ ಮೂಲೆ ಯಿಂದ ಪ್ರವಾಸಿಗರು ಬರುತ್ತಾರೆ. ಇನ್ನು ವೀಕೆಂಡ್ ಎಂದು ದೂರದ ಪ್ರವಾಸೀತಾಣಗಳಿಗೆ ತೆರಳಿ ಎಂಜಾಯ್ ಮಾಡುತ್ತಿದ್ದ ಪರಿಸರ ಪ್ರೇಮಿಗಳು, ಬೆಂಗಳೂರಿಗೆ ಹತ್ತಿರಲ್ಲೇ ಇರುವ ನಂದಿಬೆಟ್ಟಕ್ಕೆ ವಾರಕ್ಕೆ ಒಂದು ಬಾರಿಯಾದರೂ ಭೇಟಿ ನೀಡಿ ಆನಂದಿಸಬೇಕು ಎನ್ನುತ್ತಾರೆ.

ಇದನ್ನೂ ಓದಿ :ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಸೋಮವಾರ ಕೆಲ ಶಾಲೆಗಳಿಗೆ ರಜೆ ಘೋಷಣೆ

ABOUT THE AUTHOR

...view details