ಚಿಕ್ಕಬಳ್ಳಾಪುರ:ಹಳೇ ದ್ವೇಷದ ಹಿನ್ನೆಲೆ, ಯುವಕನೋರ್ವನ ಬೈಕ್ಗೆ ಡಿಕ್ಕಿ ಹೊಡೆದದ್ದಲ್ಲದೆ, ಆತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಪ್ರಕರಣ ಬಾಗೇಪಲ್ಲಿಯಲ್ಲಿ ನಡೆದಿದೆ.
ಬೈಕ್ಗೆ ಡಿಕ್ಕಿ ಹೊಡೆದು ಯುವಕನ ಮೇಲೆ ಚಾಕುವಿನಿಂದ ಹಲ್ಲೆ - ಚಿಕ್ಕಬಳ್ಳಾಪುರ ಸುದ್ದಿ
ಹಳೇ ದ್ವೇಷದ ಹಿನ್ನೆಲೆ, ಯುವಕನೋರ್ವನ ಬೈಕ್ಗೆ ಡಿಕ್ಕಿ ಹೊಡೆದು, ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ.

ಹಳೇ ದ್ವೇಷದ ಹಿನ್ನೆಲೆ..ಯುವಕನ ಬೈಕ್ಗೆ ಡಿಕ್ಕಿ ಹೊಡೆದು ಮಚ್ಚಿನಿಂದ ಹಲ್ಲೆ
ಯುವಕನ ಬೈಕ್ಗೆ ಡಿಕ್ಕಿ ಹೊಡೆದು ಚಾಕುವಿನಿಂದ ಹಲ್ಲೆ
ಚೇತನ್ಕುಮಾರ್ ಎಂಬ ಯುವಕ ನಿನ್ನೆ ರಾತ್ರಿ ಏಟಗಡ್ಡಪಲ್ಲಿ ಗ್ರಾಮ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಕಾರ್ತಿಕ್ ಮತ್ತು ಸುದೀಪ್ ಎಂಬ ಇಬ್ಬರು ಈತನನ್ನು ಹಿಂಬಾಲಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗ್ತಿದೆ. ಚೇತನ್ ಆ ಇಬ್ಬರಿಂದ ತಪ್ಪಿಸಿಕೊಂಡು ಓಡುವಾಗ ಚಾಕುವಿನಿಂದ ಆತನ ಕೈಗೆ ಚುಚ್ಚಿದ್ದಾರೆ. ಅಲ್ಲದೇ, ಚೇತನ್ಕುಮಾರ್ ಬೈಕ್ನ್ನ ಸುಟ್ಟು ಹಾಕಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ, ಗಾಯಾಳು ಚೇತನ್ ಬಾಗೇಪಲ್ಲಿ ಸರ್ಕಾರಿ ಆಸ್ಪೆತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
ಚಿಕ್ಕಬಳ್ಳಾಪುರ ಸುದ್ದಿ