ಕರ್ನಾಟಕ

karnataka

ETV Bharat / state

ಪದವಿ ಮುಗಿಸಿದರೂ ಸಿಗದ ಕೆಲಸ: ನೇಣಿಗೆ ಶರಣಾದ ಯುವಕ - ಡೆತ್ ನೋಟ್ ಬರೆದು ಆತ್ಮ ಹತ್ಯೆ

ಚಿಕ್ಕಬಳ್ಳಾಪುರದಲ್ಲಿ ಯುವಕನೊಬ್ಬ ಪದವಿ ಮುಗಿಸಿದರೂ ಕೆಲಸ ಸಿಗಲಿಲ್ಲವೆಂದು ನೊಂದು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.

ಯುವಕ

By

Published : Oct 31, 2019, 1:27 PM IST

ಚಿಕ್ಕಬಳ್ಳಾಪುರ:ಪದವಿ ಮುಗಿಸಿದರೂ ಕೆಲಸ ಸಿಗಲಿಲ್ಲವೆಂದು ನೊಂದ ಯುವಕನೊಬ್ಬ ಡೆತ್ ನೋಟ್ ಬರೆದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾರಗನಹಳ್ಳಿ ಗ್ರಾಮದ ಮುರಳಿ (24) ಮೃತ. ಬಿಕಾಂ ಮುಗಿದ ನಂತರಈತ ಆರು ತಿಂಗಳ ಹಿಂದೆ ಗುಲ್ಬರ್ಗದಲ್ಲಿ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸಿ ಮತ್ತೆ ಸ್ವ ಗ್ರಾಮಕ್ಕೆ ವಾಪಾಸ್ ಆಗಿದ್ದ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಹುಡಿಕುತ್ತಿದ್ದ. ಕೆಲಸ ಸಿಗದೆ ಮನನೊಂದು ತನ್ನ ಮನೆಯಲ್ಲಿ ರಾತ್ರಿ ನೇಣು ಬಿಗಿದು ಕೊಂಡಿದ್ದಾನೆ. ಕೂಡಲೆ ತಂದೆ ಮುನಿಕೃಷ್ಣಪ್ಪ ನೋಡಿ ಹತ್ತಿರದ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ.

ABOUT THE AUTHOR

...view details