ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಡೆಂಗ್ಯೂ ಮಹಾ ಮಾರಿಗೆ ಹತ್ತು ವರ್ಷದ ಬಾಲಕಿ ಬಲಿ ಶಂಕೆ - ಚಿಕ್ಕಮಗಳೂರು ಜಿಲ್ಲೆ

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಕಡೆಹಳ್ಳಿ ಗ್ರಾಮದ ಶ್ರೀನಿವಾಸ್​ ಎಂಬುವವರ 10 ವರ್ಷದ ಮಗಳು ಶಂಕಿತ ಡೆಂಗ್ಯೂನಿಂದ ಬಲಿಯಾಗಿದ್ದಾಳೆ. ಇದಕ್ಕೆ ಗ್ರಾಮದಲ್ಲಿನ ಅಸ್ವಚ್ಛತೆಯೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ಮೃತ ಬಾಲಕಿ

By

Published : Sep 26, 2019, 4:36 PM IST

Updated : Sep 26, 2019, 5:04 PM IST

ಚಿಕ್ಕಬಳ್ಳಾಪುರ:ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಡೆಹಳ್ಳಿಯ ಶ್ರೀನಿವಾಸ ಎಂಬುವವರ 10 ವರ್ಷದ ಮಗಳು ಡೆಂಗ್ಯೂ ಜ್ವರ ಶಂಕೆಗೆ ಬಲಿಯಾಗಿದ್ದಾಳೆ ಎನ್ನಲಾಗಿದೆ.

ಮೃತ ಬಾಲಕಿ

ಎರಡು ದಿನಗಳಿಂದ ಜ್ವರ ಬಳಲುತ್ತಿದ್ದ ಬಾಲಕಿಯನ್ನು ತಾಲೂಕಿನ ಗುಡಿಬಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಬಾಲಕಿ ಶಾಲೆಗೆ ಹೋಗಿ ಮನೆಗೆ ವಾಪಾಸಾಗಿದ್ದಾಳೆ. ಜ್ವರ ಹೆಚ್ಚಾಗಿದ್ದರಿಂದ ಬೆಂಗಳೂರಿನ ಪೀಪಲ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ.

ಗುಡಿಬಂಡೆ ತಾಲೂಕಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಇದರಿಂದಲೇ ಸಾಂಕ್ರಾಮಿಕ ಕಾಯಿಲೆ, ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ನಂತಹ ಜ್ವರ ಉಲ್ಬಣವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Last Updated : Sep 26, 2019, 5:04 PM IST

ABOUT THE AUTHOR

...view details