ಚಿಕ್ಕಬಳ್ಳಾಪುರ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿವೋರ್ವ ತನ್ನ 10 ತಿಂಗಳ ಮಗಳೊಂದಿಗೆ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬ್ರಾಹ್ಮಣದಿನ್ನೆ ಗ್ರಾಮದ ಬಳಿ ನಡೆದಿದೆ.
15 ದಿನದ ಹಿಂದಷ್ಟೇ 2ನೇ ಮದುವೆ: ಮೊದಲ ಪತ್ನಿ ಸಾವಿನಿಂದ ನೊಂದಿದ್ದ ವ್ಯಕ್ತಿ ಮಗುವಿನೊಂದಿಗೆ ಆತ್ಮಹತ್ಯೆ - Brahmanadinne village of Chintamani taluk
ಪತ್ನಿ ಕಳೆದುಕೊಂಡ ನೋವಿನಿಂದ ವ್ಯಕ್ತಿವೋರ್ವ ತನ್ನ 10 ತಿಂಗಳ ಮಗಳೊಂದಿಗೆ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ರವಿ (35), ಕುಸುಮ ಗಂಗಾ (10 ತಿಂಗಳ ಮಗು) ಮೃತರು. ರವಿಯ ಮೊದಲನೇ ಪತ್ನಿ ಮೂರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದು, ಇವರಿಗೆ 10 ತಿಂಗಳ ಹೆಣ್ಣು ಮಗುವಿತ್ತು. ಮಗುವಿನ ಪೋಷಣೆಗಾಗಿ ಹಾಗೂ ಮನೆಯವರ ಒತ್ತಾಯಕ್ಕೆ ಮಣಿದು ರವಿ ಕಳೆದ 15 ದಿನಗಳ ಹಿಂದೆಯಷ್ಟೇ ಎರಡನೇ ವಿವಾಹವಾಗಿದ್ದರು. ಆದರೆ ಮೊದಲ ಪತ್ನಿಯ ಸಾವಿನಿಂದ ನೊಂದಿದ್ದ ರವಿ ತನ್ನ ಮಗಳೊಂದಿಗೆ ಕಾರಿನಲ್ಲಿ ತಾಲೂಕಿನ ಗಡದಾಸನಹಳ್ಳಿಯ ಮಂಜುನಾಥ್ ಎಂಬುವರಿಗೆ ಸೇರಿದ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃಷಿ ಹೊಂಡದಲ್ಲಿದ್ದ ಮೃತದೇಹಗಳನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.