ಕರ್ನಾಟಕ

karnataka

ETV Bharat / state

ಬಳ್ಳಿ ಆಲೂಗಡ್ಡೆ ಬೆಳೆದು ಸೈ ಎನಿಸಿಕೊಂಡ ರೈತ - ETv Bharat news

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ನಿವಾಸಿ ಎ ಎಂ ತ್ಯಾಗರಾಜು ಎಂಬ ರೈತ ಯಾವುದೇ ರಾಸಾಯನಿಕ ಸಿಂಪಡಣೆ ಮಾಡದೇ ಬಳ್ಳಿ ಆಲೂಗಡ್ಡೆ ಬೆಳೆಯುವಲ್ಲಿ ಯಶಸ್ವಿ ಮಾದರಿ ರೈತನಾಗಿದ್ದಾರೆ.

A M Thyagaraju is a farmer who grows vine potatoes
ಬಳ್ಳಿ ಆಲೂಗಡ್ಡೆ ಬೆಳೆದ ರೈತ ಎ ಎಂ ತ್ಯಾಗರಾಜು

By

Published : Nov 10, 2022, 2:56 PM IST

ಚಿಕ್ಕಬಳ್ಳಾಪುರ:-ಕೃಷಿ ವ್ಯವಸಾಯ ಎಂದರೇ ದೂರು ಉಳಿಯುವ ಕಾಲದಲ್ಲಿ ರೈತರೊಬ್ಬರು ಯಾವುದೇ ರಾಸಾಯನಿಕ ಸಿಂಪಡಣೆ ಮಾಡದೇ ಬಳ್ಳಿ ಆಲುಗಡ್ಡೆ ಬೆಳೆಯುವಲ್ಲಿ ಯಶಸ್ವಿ ಮಾದರಿ ರೈತನಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ನಿವಾಸಿ ಎ ಎಂ ತ್ಯಾಗರಾಜು ಎಂಬ ರೈತ ಕಳೆದ 6 ತಿಂಗಳ ಹಿಂದೆ ಮೈಸೂರು ಗಡ್ಡೆ ಗೆಣಸು ಮೇಳದಲ್ಲಿ 1 ಕೆಜಿ ಗೆ 200 ರೂ ನೀಡಿ 5 ಕೆಜಿ ತಂದಿದ್ದ ಈಗ ಬಳ್ಳಿ ಆಲೂಗಡ್ಡೆಯನ್ನು ದ್ರಾಷ್ಷಿ ಬೆಳೆಯುವ ಚಪ್ಪರಕ್ಕೆ ನಾಟಿ ಬೆಳೆದು ಅಚ್ಚರಿಯಾಗುವಂತೆ ಮಾಡಿದ್ದಾರೆ.

ಕಾಡು ಪ್ರದೇಶದ ಜನ ಪ್ರತಿನಿತ್ಯ ಬಳಸುವ ಸಲುವಾಗಿ ಕಾಡುಗಾಡಿನಲ್ಲಿಯೇ ಬೆಳೆಯುತ್ತಿದ್ದ ಬಳ್ಳಿ ಆಲುಗಡ್ಡೆಯನ್ನು ಸ್ವಲ್ಪ ನೀರಿನಲ್ಲೇ ಯಾವುದೇ ರಾಸಾಯನಿಕ ಇಲ್ಲದೆ ಉತ್ತಮ ಹಿಳುವರಿ ಪಡೆದು ಹಾಗೂ ವಿವಿಧ ಬಗೆಯ ಗಡ್ಡೆ ಗೆಣಸು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಳೆಯಿದ್ದರು ಫಸಲನ್ನು ಮಾರಾಟ ಮಾಡದೇ ಫಸಲು ನೋಡಲು ಬಂದ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಉಚಿತವಾಗಿ ಬಳ್ಳಿ ಆಲುಗಡ್ಡೆಗಳನ್ನು ನೀಡಿ ಇಳುವರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮದ ಸರ್ಕಾರಿ ಶಾಲೆಗೆ ಬಿಸಿ ಊಟದಲ್ಲಿ ಬಳಿಸಿಕೊಳ್ಳಲು ಉಚಿತವಾಗಿ ಬಳ್ಳಿ ಆಲುಗಡ್ಡೆಗಳನ್ನು ನೀಡುತ್ತಿದ್ದಾರೆ.

ಇನ್ನು ಬಳ್ಳಿ ಆಲುಗಡ್ಡೆಯಲ್ಲಿ ಉತ್ತಮ‌ ಔಷಧ ಗುಣಗಳಿದ್ದು, ಆರೋಗ್ಯಕ್ಕೂ ಹೆಚ್ಚು ಉಪಕಾರಿಯಾಗಿದೆ ಎಂದು ರೈತ ಎ ಎಂ ತ್ಯಾಗರಾಜು ಅವರು ತಿಳಿಸಿದರು. ಮಧುಮೇಹ, ಅಸ್ತಮ, ಬಿಪಿ ಸೇರಿದಂತೆ ಹಲವಾರು ಖಾಯಿಲೆಗಳಿಗೆ ರಾಮಬಾಣ ಆಗಿದ್ದು, ಈಗಾಗಲೇ ಗ್ರಾಮದ ಕೆಲವು ಮಧುಮೇಹಿಗಳು ಆಲುಗಡ್ಡೆಯನ್ನು ಬಳಿಸಿ ತಮ್ಮ ಶುಗರ್ ಲೇವಲ್ ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶವಿದ್ದರು ಇಳುವರಿಯ ಬಗ್ಗೆ ರೈತರಿಗೆ ಮಾಹಿತಿ ನೀಡುವ ಉದ್ದೇದಿಂದ ಲಕ್ಷಾಂತರ ರೂ ಫಸಲನ್ನು ಉಚಿತವಾಗಿ ನೀಡಿ ಕೃಷಿಯನ್ನು ತೊರೆದು ಸಿಟಿಗಳತ್ತಾ ಮುಖ ಮಾಡುವವರಿಗೆ ಮಾದರಿ ರೈತನಾಗಿದ್ದಾರೆ.


ABOUT THE AUTHOR

...view details