ಕರ್ನಾಟಕ

karnataka

ETV Bharat / state

ಶಾಸಕ ಸುಬ್ಬಾರೆಡ್ಡಿ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ್ದ ಮಹಿಳೆ ಬಂಧನ.. - ರಾಚವಾರಪಲ್ಲಿ ಗ್ರಾಮ

ಇವರು ಶಾಸಕರ ವಿರುದ್ಧ ಹೇಳಿಕೆ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Woman arrested
ಮಹಿಳೆ ಬಂಧನ

By

Published : May 5, 2020, 8:56 PM IST

ಚಿಕ್ಕಬಳ್ಳಾಪುರ :ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ವಿರುದ್ಧ ಅವಹೇಳನಕಾರಿ ಮಾತನಾಡಿದ್ದ ಮಹಿಳೆಯನ್ನು ಚೇಳೂರಿನ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿ ತಾಲೂಕು ರಾಚವಾರಪಲ್ಲಿ ಗ್ರಾಮದ ಆದಿಲಕ್ಷ್ಮಮ್ಮ ಎಂಬ ಮಹಿಳೆ ಬಂಧಿತರು. ಇವರು ಶಾಸಕರ ವಿರುದ್ಧ ಹೇಳಿಕೆ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಶಾಸಕ ಸುಬ್ಬಾರೆಡ್ಡಿ ವಿರುದ್ಧ ಅವಹೇಳಕಾರಿ ಮಾತನಾಡಿರುವ ವಿಡಿಯೋ..

ಕೊರೊನಾ ವೈರಸ್ ಬಂದು 40 ದಿನಗಳಾಗಿದೆ. ಇದರಿಂದ ಜನರ ಜೀವನ ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಗ್ರಾಮದ ಜನರಿಗೆ ಸಹಾಯ ನೀಡಲಿಲ್ಲ. ಚುನಾವಣೆ ಬಂದಾಗ ಹಳೆಯ ಸೀರೆಗಳನ್ನು ತಂದು ಅದನ್ನು ಐರನ್ ಮಾಡಿ ಜನರಿಗೆ ನೀಡಿ ನೀವು ಮೋಸದಿಂದ ಮತಗಳನ್ನು ಹಾಕಿಸಿಕೊಂಡು ಗೆಲ್ಲುತ್ತಿದ್ದೀಯಾ... ಈ ಬಾರಿ ಬಂದರೆ ಕಾಲಿಡಿಸುವುದಿಲ್ಲ ಎಂದು ಅವಹೇಳನ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಮಹಿಳೆ ಮಾತನಾಡಿರುವ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

ಇದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ ಪಾತಪಾಳ್ಯ, ಪೊಲೀಸ್ ಠಾಣೆಗೆ ದೂರು ನೀಡಿದ ತಕ್ಷಣವೇ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details