ಕರ್ನಾಟಕ

karnataka

ETV Bharat / state

ಬಾಗೇಪಲ್ಲಿ ಬಳಿ ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಕಾರು‌ ಪಲ್ಟಿ.. ಸಿನಿಮಾ ಸ್ಟೈಲ್​ನಲ್ಲಿ ವೇಗವಾಗಿ ಹೊರಟಿದ್ದವರಿಗೆ ಗಂಭೀರ ಗಾಯ - ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ

ಆಂಧ್ರದಿಂದ ಬೆಂಗಳೂರಿಗೆ ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ಕಾರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಲ್ಟಿಯಾಗಿದೆ.

ರಕ್ತ ಚಂದನ ಸಾಗಿಸುತ್ತಿದ್ದ ಇನ್ನೋವಾ ಕಾರು‌ ಪಲ್ಟಿ
ರಕ್ತ ಚಂದನ ಸಾಗಿಸುತ್ತಿದ್ದ ಇನ್ನೋವಾ ಕಾರು‌ ಪಲ್ಟಿ

By ETV Bharat Karnataka Team

Published : Sep 12, 2023, 12:16 PM IST

Updated : Sep 12, 2023, 12:48 PM IST

ಚಿಕ್ಕಬಳ್ಳಾಪುರ:ಚಾಲಕನ ನಿಂಯತ್ರಣ ತಪ್ಪಿ ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಕಾರು ಪಲ್ಟಿಯಾಗಿ, ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಸಾದಲಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ನೆರೆಯ ರಾಜ್ಯ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಭೇಟಿ ಕೊಟ್ಟು ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಲ್ಟಿಯಾಗಿರುವ ಕಾರು ಮತ್ತು ಅಕ್ರಮವಾಗಿ ಸಾಗಿಸುತ್ತಿದ್ದ ರಕ್ತಚಂದನ

ಆರೋಪಿಗಳು ನೆರೆಯ ಆಂಧ್ರಪ್ರದೇಶದ ಮೂಲದವರು ಎಂದು ತಿಳಿದು ಬಂದಿದ್ದು, ಯಾವುದೇ ದಾಖಲಾತಿಗಳು ಇಲ್ಲದೆ ಕಾರಿನ ಒಳಗಡೆ ಸುಮಾರು 15ಕ್ಕೂ ಹೆಚ್ಚು ರಕ್ತ ಚಂದನದ ತುಂಡುಗಳನ್ನು ಸಾಗಣೆ ಮಾಡಿ ಅಧಿಕ ಹಣಕ್ಕೆ ಮಾರುವ ಉದ್ದೇಶದಿಂದ ಸಿನಿಮಾ ಸ್ಟೈಲ್​ನಲ್ಲಿ ಮಾಸ್ಟರ್​ ಪ್ಲಾನ್ ಮಾಡಿ ಸಾಗಿಸುತ್ತಿದ್ದರು. ಆದರೆ ಕಾರಿನಲ್ಲಿ ಬರುವಾಗ ಯಾರಿಗೂ ಅನುಮಾನ ಬಾರದಂತೆ ಅತಿಯಾದ ವೇಗದಿಂದ ಚಲಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಆರೋಪಿಗಳು ಅಕ್ರಮ ದಂಧೆ ನಡೆಸಲು ಮುಂದಾಗಿದ್ದರು. ಆದ್ರೆ ಅಪಘಾತದಿಂದ ಇವರ ಕೃತ್ಯ ಬಯಲಿಗೆ ಬಂದಿದೆ.

ಚಾಮರಾಜನಗರದಲ್ಲೂ ಅಕ್ರಮ ರಕ್ತಚಂದನ ಸಾಗಾಟ(ಹಿಂದಿನ ಪ್ರಕರಣ):ಸೂಪರ್ ಹಿಟ್ ಮೂವಿ ರೀತಿಯಲ್ಲಿಯೇ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ ಲಕ್ಕೂರು ಬಳಿ ರಕ್ತ ಚಂದನ ಸಾಗಿಸುತ್ತಿದ್ದ ಘಟನೆ ನಡೆದಿತ್ತು. ಬೆಂಗಳೂರು ಮೂಲದ ರವಿ(47), ಚಾಮರಾಜನಗರದ ಸರಗೂರು ಮೋಳೆಯ ಎಸ್ ಎಂ ಗೋವಿಂದರಾಜು(43), ಆನಂದ್(40), ಸಿ ಎಸ್ ಆಸ್ಕರ್ ಪಾಷ(63), ಮಹೇಂದ್ರ(32) ಬಂಧಿತ ಆರೋಪಿಗಳಾಗಿದ್ದರು.

ಬಂಧಿತ ಆರೋಪಿಗಳು ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಮೇಲೆ ಹೂಕೋಸುಗಳನ್ನು ತುಂಬಿಕೊಂಡು ಅವುಗಳ ಮಧ್ಯೆ ಅಕ್ರಮವಾಗಿ ರಕ್ತ ಚಂದನ ಮರದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಡೀಪುರದ ಅರಣ್ಯ ಇಲಾಖೆಯ ಮೂರು ತಂಡಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಈ ಸಂಬಂಧ ಗುಂಡ್ಲುಪೇಟೆ ಬಫರ್ ಝೋನ್​ ವಲಯದಲ್ಲಿ ಪ್ರಕರಣ ದಾಖಲಾಗಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಬೊಲೆರೊ ವಾಹನ ಸೇರಿದಂತೆ 50 ಕೆಜಿಯಷ್ಟು ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಬೆಳ್ತಂಗಡಿಯಲ್ಲೂ ಅಕ್ರಮ ಸಾಗಣೆ, ಪೊಲೀಸರ ವಶಕ್ಕೆ:ಬೆಳ್ತಂಗಡಿಯ ವೇಣೂರು ಸಮೀಪ ಕರಿಮಣೇಲು ಎಂಬಲ್ಲಿ ಬೆಂಗಳೂರು ಸಿಐಡಿ ಪೊಲೀಸ್ ಅರಣ್ಯ ಘಟಕದ (FMS) ತಂಡವು 125 ಕೆಜಿ ಅಕ್ರಮವಾಗಿ ಸಾಗಿಸುತ್ತಿದ್ದ ರಕ್ತ ಚಂದನ ವಶಕ್ಕೆ ಪಡೆದುಕೊಂಡಿದ್ದರು. ನಂತರ ವೇಣೂರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು.

ಇದನ್ನೂ ಓದಿ:ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಣೆ: ಚಾಮರಾಜನಗರದಲ್ಲಿ ಐವರು ಖದೀಮರ ಬಂಧನ

Last Updated : Sep 12, 2023, 12:48 PM IST

ABOUT THE AUTHOR

...view details