ಚಿಕ್ಕಬಳ್ಳಾಪುರ: ಬೆಟ್ಟದ ಮೇಲೆ ಕರಡಿಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾರಕೂರು ಬೆಟ್ಟದ ಬಳಿ ನಡೆದಿದೆ.
ಬೆಟ್ಟದ ಮೇಲೆ ಪ್ರತ್ಯಕ್ಷವಾದ ಕರಡಿ, ಸ್ಥಳೀಯರಲ್ಲಿ ಆತಂಕ.. - ಬೆಟ್ಟದ ಮೇಲೆ ಕರಡಿ
ಚಿಕ್ಕಬಳ್ಳಾಪುರ ಜಿಲ್ಲೆಯ ಕಾರಕೂರು ಎಂಬ ಗುಡ್ಡದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಇದನ್ನು ಕಂಡು ಜನರು ಭಯ ಭೀತರಾಗಿದ್ದಾರೆ.
![ಬೆಟ್ಟದ ಮೇಲೆ ಪ್ರತ್ಯಕ್ಷವಾದ ಕರಡಿ, ಸ್ಥಳೀಯರಲ್ಲಿ ಆತಂಕ..](https://etvbharatimages.akamaized.net/etvbharat/prod-images/768-512-4164416-thumbnail-3x2-vickyjpg.jpg)
ಗುಡ್ಡದಲ್ಲಿ ಪ್ರತ್ಯಕ್ಷವಾದ ಕರಡಿ
ಗುಡ್ಡದಲ್ಲಿ ಪ್ರತ್ಯಕ್ಷವಾದ ಕರಡಿ
ತಾಲೂಕಿನ ಕಾರಕೂರು ಬೆಟ್ಟದ ಮೇಲೆ ಕರಡಿ ಪ್ರತ್ಯಕ್ಷವಾಗಿದ್ದು, ಈಗ ಗ್ರಾಮದ ಸುತ್ತಮುತ್ತ ಸ್ಥಳೀಯರಲ್ಲಿ ಭಯ ಮನೆ ಮಾಡಿದಂತಾಗಿದೆ. ಕರಡಿ ಬೆಟ್ಟದ ಮೇಲೆ ಓಡಾಟ ನಡೆಸುತ್ತಿದ್ದು, ಮಂಗಗಳ ಹಿಂಡು ಹಿಂಬದಿಯಿಂದ ಕಾಟ ನೀಡುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿವೆ.ಬೆಟ್ಟದ ಮೇಲೆ ಕರಡಿಯ ಓಡಾಟದ ದೃಶ್ಯ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.