ಚಿಕ್ಕಬಳ್ಳಾಪುರ :ಜಿಲ್ಲೆಯಲ್ಲಿ ಇಂದು 97 ಕೊರೊನಾ ಸೋಂಕಿತ ಪ್ರಕರಣ ದೃಢಪಟ್ಟಿವೆ. ಒಟ್ಟು ಸೋಂಕಿತರ ಸಂಖ್ಯೆ 3,994ಕ್ಕೆ ಏರಿದೆ.
ಇಂದು 99 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ. ಚಿಕ್ಕಬಳ್ಳಾಪುರ 28, ಚಿಂತಾಮಣಿ 17, ಗೌರಿಬಿದನೂರು 36, ಬಾಗೇಪಲ್ಲಿ 6 ಹಾಗೂ ಶಿಡ್ಲಘಟ್ಟ 10 ಸೋಂಕಿತ ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಾದ್ಯಂತ ಸೋಂಕಿತರ ಸಂಖ್ಯೆ 3,994 ಕ್ಕೆ ಏರಿದೆ.
ಇದರಲ್ಲಿ 10 ಸೋಂಕಿತರಿಗೆ ಐಎಲ್ಐ ಸಂಪರ್ಕ 14 ಜನರಿಗೆ ಡೊಮೆಸ್ಟಿಕ್ ಟ್ರಾವೆಲ್ ಹಾಗೂ ಉಳಿದ 73 ಜನರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ದೃಢಪಟ್ಟಿವೆ. ಚಿಂತಾಮಣಿ 7 ಸೋಂಕಿತರು, ಚಿಕ್ಕಬಳ್ಳಾಪುರ 22, ಬಾಗೇಪಲ್ಲಿ 14, ಶಿಡ್ಲಘಟ್ಟ 18, ಗೌರಿಬಿದನೂರು 36 ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ 2 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಸದ್ಯ 643 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೊಲೇಷನ್ ಸೇರಿ ತಾಲೂಕಿನ ಕೋವಿಡ್ ಕೇರ್ ಸೆಂಟರ್, ಹೋಂ ಐಸೋಲೇಷನ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.