ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಇಂದು 95 ಕೊರೊನಾ ಸೋಂಕಿತ ಪ್ರಕರಣಗಳು ಧೃಡಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,281ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರ 3, ಚಿಂತಾಮಣಿ 25, ಗೌರಿಬಿದನೂರು 25, ಬಾಗೇಪಲ್ಲಿ 18, ಗುಡಿಬಂಡೆ 4 ಹಾಗೂ ಶಿಡ್ಲಘಟ್ಟ 20 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.
ಇದರಲ್ಲಿ 23 ಸೋಂಕಿತರಿಗೆ ಐಎಲ್ಐ ಸಂಪರ್ಕ 8 ಜನರಿಗೆ ಡಮೆಸ್ಟಿಕ್ ಟ್ರಾವೆಲ್ ಹಾಗೂ ಉಳಿದ 64 ಜನರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ಧೃಡಪಟ್ಟಿದೆ.
ಇನ್ನೂ ಚಿಂತಾಮಣಿ 22 ಸೊಂಕಿತರು, ಚಿಕ್ಕಬಳ್ಳಾಪುರ 19, ಬಾಗೇಪಲ್ಲಿ 12, ಶಿಡ್ಲಘಟ್ಟ 17, ಗೌರಿಬಿದನೂರು 8 ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ 3 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 3,450ಕ್ಕೆ ಏರಿಕೆಯಾಗಿದೆ.
ಸದ್ಯ 643 ಸೋಕಿತರಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೊವೀಡ್ ಕೇರ್ ಸೆಂಟರ್, ಹೋಂ ಐಸೋಲೇಷನ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಚಿಂತಾಮಣಿಯ 50 ವರ್ಷದ ಪುರುಷ ಹಾಗೂ ಬಾಗೇಪಲ್ಲಿ ಮೂಲದ 82 ವರ್ಷ ಪುರುಷನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.