ಕರ್ನಾಟಕ

karnataka

By

Published : Sep 13, 2020, 6:56 PM IST

ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 89 ಮಂದಿಗೆ ಕೊರೊನಾ ದೃಢ :105 ಮಂದಿ ಗುಣಮುಖ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ. ಎಷ್ಟು ಮಂದಿ ಗುಣಮುಖರಾಗಿದ್ದಾರೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

Chikkaballapura
Chikkaballapura

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಈ ದಿನ ಹೊಸದಾಗಿ 89 ಜನರಿಗೆ ಕೊರೊನಾ ಸೋಂಕು ತಗುಲಿದೆ. 105 ಮಂದಿ ಗುಣಮುಖರಾಗಿದ್ದಾರೆ.

ಇಂದಿನ ಕೋವಿಡ್ ಕೇಸ್ ಗಳ ಮಾಹಿತಿ:
ಚಿಕ್ಕಬಳ್ಳಾಪುರ 15, ಚಿಂತಾಮಣಿ 35, ಗೌರಿಬಿದನೂರು 16, ಬಾಗೇಪಲ್ಲಿ 9, ಗುಡಿಬಂಡೆ 8 ಹಾಗೂ ಶಿಡ್ಲಘಟ್ಟ 6 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,729ಕ್ಕೆ ಏರಿಕೆಯಾಗಿದೆ.

105 ಮಂದಿ ಗುಣಮುಖ:
ಚಿಂತಾಮಣಿ 10 ಸೋಂಕಿತರು, ಚಿಕ್ಕಬಳ್ಳಾಪುರ 19, ಬಾಗೇಪಲ್ಲಿ 26, ಶಿಡ್ಲಘಟ್ಟ 11, ಗೌರಿಬಿದನೂರು‌ 36 ಹಾಗೂ ಗುಡಿಬಂಡೆ‌ ವ್ಯಾಪ್ತಿಯಲ್ಲಿ 3 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖಗೊಂಡವರ ಸಂಖ್ಯೆ 4,725 ಕ್ಕೆ ಏರಿಕೆಯಾಗಿದೆ.

ಮೃತರಿಷ್ಟು:
ಇಂದು ಕೊರೊನಾ ಸೋಂಕಿಗೆ 60 ವರ್ಷದ ವ್ಯಕ್ತಿ ಹಾಗೂ ಚಿಂತಾಮಣಿ 26 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸದ್ಯ 930 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೋವಿಡ್ ಕೇರ್ ಸೆಂಟರ್‌, ಹೋಂ ಐಸೋಲೇಷನ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details